Site icon Vistara News

Guest Lecturers : ಅತಿಥಿ ಉಪನ್ಯಾಸಕರ ವೇತನ 8000 ರೂ. ಹೆಚ್ಚಳ, ಪಾಠದ ಅವಧಿಯೂ ಜಾಸ್ತಿ

Guest Lecturers salarys

ಬೆಂಗಳೂರು: ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ (Guest Lecturers) ಗೌರವ ಧನವನ್ನು ಹೆಚ್ಚಿಸಿ ಉನ್ನತ ಶಿಕ್ಷಣ ಇಲಾಖೆ (Higher Education Department) ಆದೇಶ ಹೊರಡಿಸಿದೆ. ಇದರ ಜತೆಗೆ ಅವರಿಗೆ ಆರೋಗ್ಯ ವಿಮೆ (Health Insurance) ಒದಗಿಸಲಾಗಿದೆ. ಜತೆಗೆ ವಾರ್ಷಿಕ ತಲಾ 50,000 ರೂ. ಇಡುಗಂಟು ನೀಡುವುದಾಗಿ ಪ್ರಕಟಿಸಲಾಗಿದೆ. ಅತಿಥಿ ಉಪನ್ಯಾಸಕರ ಗೌರವಧನವನ್ನು (Remunaration) ಕನಿಷ್ಠ 5,000 ರೂಪಾಯಿಯಿಂದ ಗರಿಷ್ಠ 8,000 ರೂಪಾಯಿ ತನಕ ಏರಿಕೆಯಾಗಿದೆ.

ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ, 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50,000 ರೂಪಾಯಿಯಂತೆ ಗರಿಷ್ಠ 5 ಲಕ್ಷ ರೂಪಾಯಿ ಇಡುಗಂಟು ನೀಡಲು ನಿರ್ಧರಿಸಲಾಗಿದೆ. ಈ ನಡುವೆ ಕೆಲಸದ ಅವಧಿಯನ್ನು ಕೂಡಾ ಹೆಚ್ಚಿಸಲಾಗಿದೆ. ಮೊದಲು ಗರಿಷ್ಠ ಪಾಠದ ಅವಧಿ 8ರಿಂದ 10 ಗಂಟೆ ಬದಲು 15ರಿಂದ 19 ಗಂಟೆಗೆ ಹೆಚ್ಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

ಯಾರಿಗೆ ಎಷ್ಟು ವೇತನ ಹೆಚ್ಚಳ?

5 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿವರಿಗೆ 5,000 ರೂಪಾಯಿ ಹೆಚ್ಚಿಸಲಾಗಿದೆ.
5 ರಿಂದ 10 ವರ್ಷ ಸೇವಾವಧಿ ಇರುವವರಿಗೆ 6,000 ರೂಪಾಯಿ ನೀಡಲಾಗುತ್ತದೆ.
10 ರಿಂದ 15 ವರ್ಷ ಸೇವಾವಧಿ ಇರುವವರಿಗೆ 7,000 ರೂಪಾಯಿ ಹೆಚ್ಚುವರಿ ದೊರೆಯಲಿದೆ.
15 ವರ್ಷ ಮೇಲ್ಪಟ್ಟು ಸೇವಾವಧಿ ಹೊಂದಿದವರಿಗೆ 8,000 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಹಾಗಿದ್ದರೆ ಯಾರಿಗೆ ಎಷ್ಟು ವೇತನ ದೊರೆಯಲಿದೆ?

  1. 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಹೊಂದಿದವರಿಗೆ ಇನ್ನು 35,000 ರೂ. ವೇತನ ದೊರೆಯಲಿದೆ.
  2. 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31,000 ರೂ. ವೇತನ ದೊರೆಯಲಿದೆ.
  3. 5 ರಿಂದ 10 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 38,000 ರೂ. ಸಿಗಲಿದೆ.
  4. 5 ರಿಂದ 10 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 34,000 ರೂ. ದೊರೆಯಲಿದೆ.
  5. 10ರಿಂದ 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 39,000 ರೂ. ವೇತನ ಸಿಗಲಿದೆ.
  6. 10 ರಿಂದ 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 36,000 ರೂ. ವೇತನ ಸಿಗಲಿದೆ.
  7. 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 40,000 ರೂ. ವೇತನ ದೊರೆಯಲಿದೆ.
  8. 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 36,000 ರೂ. ವೇತನ ಸಿಗಲಿದೆ.

ಇದನ್ನೂ ಓದಿ : Madikeri News: ವೇತನ ಪಾವತಿಗಾಗಿ ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಆರೋಗ್ಯ ವಿಮೆ ಮತ್ತು ಇಡುಗಂಟು ಕೂಡಾ ದೊರೆಯಲಿದೆ

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50,000 ರೂಪಾಯಿ ಪ್ರಕಾರ ಗರಿಷ್ಠ 5.00 ಲಕ್ಷ ರೂಪಾಯಿ ಮೊತ್ತದ ಇಡಿಗಂಟಿನ ಸೌಲಭ್ಯ ನೀಡಲಾಗುತ್ತದೆ.

ಅತಿಥಿ ಉಪನ್ಯಾಸಕರ ಆರೋಗ್ಯ ದೃಷ್ಟಿಯಿಂದ ವಾರ್ಷಿಕ 5.00 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ, ಇದಕ್ಕೆ ಅತಿಥಿ ಉಪನ್ಯಾಸಕರು ಮಾಸಿಕ ಕಂತು ಕಟ್ಟಬೇಕಾಗುತ್ತದೆ. ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ 400 ರೂಪಾಯಿ ಸಂಗ್ರಹಿಸಲಾಗುತ್ತದೆ. ಸರ್ಕಾರ ಕೂಡಾ ಇದಕ್ಕೆ 400 ರೂ. ಸೇರಿಸಲಿದೆ.

ಪಾಠದ ಅವಧಿ ಹೆಚ್ಚಳ

ಇದೇ ವೇಳೆ ಉನ್ನತ ಶಿಕ್ಷಣ ಇಲಾಖೆ ಗೌರವ ಧನವನ್ನು ಹೆಚ್ಚಿಸುವ ಜತೆಗೆ ಪಾಠದ ಅವಧಿಯನ್ನೂ ಹೆಚ್ಚಿಸಲಾಗಿದೆ. 5ರಿಂದ 10 ವರ್ಷ ಸೇವಾವಧಿ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ಇದ್ದ ಗರಿಷ್ಠ ಉಪನ್ಯಾಸ ಅವಧಿಯನ್ನು 8/10 ಗಂಟೆ ಬದಲಾಗಿ 15/19 ಗಂಟೆಗೆ ಹೆಚ್ಚಿಸಲಾಗಿದೆ.

Exit mobile version