Site icon Vistara News

KPSC Transfer : ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್‌ ಕುಮಾರ್‌ ನೇಮಕ; ಲತಾ ಕುಮಾರಿ ವರ್ಗ

KPSC Secretary

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (Karnataka Public Service Comission-KPSC) ಕಾರ್ಯದರ್ಶಿ ಐಎಎಸ್ ಅಧಿಕಾರಿ ಕೆ.ಎಸ್. ಲತಾ ಕುಮಾರಿ (KS Latha Kumari) ಅವರನ್ನು ಕೊನೆಗೂ ಸರ್ಕಾರ ವರ್ಗಾವಣೆ (KPSC Transfer) ಮಾಡಿದೆ. ಈ ಸ್ಥಾನಕ್ಕೆ ಡಾ. ರಾಕೇಶ್‌ ಕುಮಾರ್‌ ಕೆ. (Rakesh Kumar K) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರಿಗೆ ಸರ್ಕಾರ ಈ ಹಿಂದೆ ಹತ್ತು ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಇದೀಗ ವರ್ಗಾವಣೆ ಮಾಡಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ನವೀನ್‌ ಕುಮಾರ್‌ ರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ.

ಕೆಪಿಎಸ್‌ಸಿಯ ಕಾರ್ಯದರ್ಶಿಯಾಗಿ ನೇಮಕಗೊಂಡ ಆರು ತಿಂಗಳ ಒಳಗೆ ಕೆ. ಎಸ್. ಲತಾ ಕುಮಾರಿ ವರ್ಗಾವಣೆಗೊಂಡಂತಾಗಿದೆ. ಇವರಿಗಿಂತಲೂ ಮೊದಲು ಕಾರ್ಯದರ್ಶಿಯಾಗಿದ್ದ ಸುರಳ್ಕರ್‌ ವಿಕಾಸ್‌ ಕಿಶೋರ್‌ ಕೂಡ 14 ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು. ಇದುವರೆಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಡಾ. ರಾಕೇಶ್‌ ಕುಮಾರ್‌ ಕೆ. ಆಯೋಗದ ಕಾರ್ಯದರ್ಶಿಯಾಗಿ ಇನ್ನುಮುಂದೆ ಕಾರ್ಯನಿರ್ವಹಿಸಲಿದ್ದಾರೆ.

ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಮತ್ತು ಕೆಲ ಸದಸ್ಯರು ಹಾಗೂ ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿತ್ತು. ಹೀಗಾಗಿ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಲಾಗಿತ್ತು. ಅವರನ್ನು ವರ್ಗಾವಣೆ ಮಾಡದಂತೆ ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದರೂ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಡಾ. ರಾಕೇಶ್‌ ಕುಮಾರ್‌ ಕೆ. ಅವರು ಯಾರು?

ಡಾ. ರಾಕೇಶ್ ಕುಮಾರ್ ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಪದವಿಯನ್ನು ಪಡೆದಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ನಲ್ಲಿ ಎಂ.ಎಸ್ಸಿ ಪದವಿ ಹಾಗೂ ಪಿ.ಹೆಚ್.ಡಿಯೊಂದಿಗೆ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. 2012ನೇ ಬ್ಯಾಚ್‌ ಐಎಎಸ್ ಅಧಿಕಾರಿ ಡಾ. ರಾಕೇಶ್ ಕುಮಾರ್ ಈ ಹಿಂದೆ ಜಮಖಂಡಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ತುಮಕೂರು ಜಿಲ್ಲಾಧಿಕಾರಿಯಾಗಿ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಮನಗರದಲ್ಲಿ ಜಿಲ್ಲಾಧಿಕಾರಿಯಾಗಿದ್ದರು.

ಇದನ್ನೂ ಓದಿ : KPSC Recruitment 2024: ವಿವಿಧ ಇಲಾಖೆಗಳಲ್ಲಿನ 1,227 ಹುದ್ದೆಗಳಿಗೆ ನೇಮಕ; ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

ಏನಿದು ಕರ್ನಾಟಕ ಲೋಕಸೇವಾ ಆಯೋಗ?

1921ರ ಮೊದಲು ರಾಜ್ಯ ನಾಗರಿಕ ಸೇವೆಗಳಿಗೆ ನೇಮಕ ಮಾಡುವ ವಿಷಯದಲ್ಲಿ ಸರ್ಕಾರ ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಗೆ ಸಲಹೆ ನೀಡಲು ಯಾವುದೇ ಕೇಂದ್ರ ಪ್ರಾಧಿಕಾರವು ರಾಜ್ಯದಲ್ಲಿ ಇರಲಿಲ್ಲ. ಸರ್ಕಾರ ಮತ್ತು ನೇಮಕಾತಿ ಅಧಿಕಾರಿಗಳು ಕಾಲಕಾಲಕ್ಕೆ ಸರ್ಕಾರದ ತತ್ವಗಳನ್ನು ಅನುಸರಿಸುತ್ತಿದ್ದಾರೆ. ಆದೇಶ ಸಂಖ್ಯೆ 1827: 80 E.A.G.308 ದಿನಾಂಕ: 16-05-1921 ರಂದು ಸರ್ಕಾರವು ಮೊದಲ ಬಾರಿಗೆ ನೇಮಕಾತಿ ಕೇಂದ್ರವನ್ನು “ಕೇಂದ್ರ ನೇಮಕಾತಿ ಮಂಡಳಿ” ಎಂದು ಹೆಸರಿಸಿತು. ಈ ಮಂಡಳಿಯು 1940 ರವರೆಗೆ ಸರ್ಕಾರಿ ಸಚಿವಾಲಯದ ಕಚೇರಿಯೊಂದಿಗಿತ್ತು. ಸರ್ಕಾರ ತನ್ನ ಆದೇಶ ಸಂಖ್ಯೆ 3685-3735-ಸಿಬಿ 103-39-1 ದಿನಾಂಕ: 19-01-1940 ರಂದು ಸಾರ್ವಜನಿಕ ಸೇವಾ ಆಯುಕ್ತರನ್ನು ನೇಮಕ ಮಾಡಿತು.

 18-05-1951ರಲ್ಲಿ ಭಾರತದ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಲೋಕಸೇವಾ ಆಯೋಗವನ್ನು ರಚಿಸಲಾಯಿತು. ಸಾರ್ವಜನಿಕ ಸೇವಾ ಆಯೋಗದ nನಿಯಮಗಳ 1950 ರ ಷರತ್ತು 14 ರ ಪ್ರಕಾರ, 18-05-1951 ರಿಂದ ಪಬ್ಲಿಕ್ ಸರ್ವೀಸ್ ಕಮೀಷನರ್ ಸಿಬ್ಬಂದಿಗಳು ¸ಲೋಕಸೇವಾ ಆಯೋಗದ ಸಿಬ್ಬಂದಿ ಕೇಂದ್ರವಾಗಿ ಮುಂದುವರೆದರು.

ಮೈಸೂರು (ಈಗ ಕರ್ನಾಟಕ) ಸರ್ಕಾರಿ ಸಚಿವಾಲಯದ ಭಾಗವಾಗಿರುವ ಕೇಂದ್ರ ನೇಮಕಾತಿ ಮಂಡಳಿಯ ಕಚೇರಿಯು ಸರ್ಕಾರಿ ಸಚಿವಾಲಯ ಮ್ಯಾನ್ಯುವಲ್ಅನ್ನು ಕಚೇರಿ ಕಾರ್ಯವಿಧಾನಗಳಿಗೆ ಅನುಸರಿಸಿತು. ಸಾರ್ವಜನಿಕ ಸೇವಾ ಆಯುಕ್ತರ ಕಚೇರಿಯಲ್ಲಿ ಮತ್ತು ನಂತರ ಪಬ್ಲಿಕ್ ಸರ್ವಿಸ್ ಆಯೋಗದ ಕಚೇರಿಯಲ್ಲಿ ಸಹ ಸ್ಪರ್ಧಾತ್ಮಕ ಪರೀಕ್ಷೆಗಳು, ಇಲಾಖೆಯ ಪರೀಕ್ಷೆಗಳು ಇತ್ಯಾದಿಗಳ ನೇಮಕಾತಿ ಮತ್ತು ನಡವಳಿಕೆಯನ್ನು ಕೈಗೊಳ್ಳಲು ಅಗತ್ಯ ಅಧಿಸೂಚನೆಗಳು ಮುಂದುವರೆದವು.

ಮೈಸೂರು ಪಬ್ಲಿಕ್ ಸರ್ವಿಸ್ ಆಯೋಗದ 1950 ರ ನಿಬಂಧನೆಗಳ ಷರತ್ತು III ರ ಅನುಸಾರ, ಶ್ರೀ H.B. ಗುಂಡಪ್ಪ ಗೌಡ ಅಧ್ಯಕ್ಷರು, ಜಾರ್ಜ್ ಮಠಾನ್ ಮತ್ತು ಚ್.ಎಂ. ಮಲ್ಲಿಕಾರ್ಜುನಪ್ಪ ಆಯೋಗದ ಸದಸ್ಯರಾಗಿ ನೇಮಕಗೊಂಡರು.ಅಧ್ಯಕ್ಷರು  ಕ್ರಮವಾಗಿವಹಿಸಿಕೊಂಡರು. 1951 ಮೇ 19, 23 ಹಾಗೂ 25 ರಂದು ಅಧಿಕಾರ ವಹಿಸಿಕೊಂಡರು.   ಅಂದಿನಿಂದ ಸರ್ಕಾರದಿಂದ ಆಯೋಗಕ್ಕೆ 13 ಜನ ಚೇರ್ಮನ್ ಮತ್ತು 67 ಸದಸ್ಯರನ್ನು ನೇಮಕ ಮಾಡಲಾಗಿದೆ.

Exit mobile version