Site icon Vistara News

Astrology Answers | ಜೀವನದ ಪ್ರತಿ ಕ್ಷಣದಲ್ಲಿಯೂ ಮೋಸವಾಗುತ್ತಿದೆ, ದಾರಿ ತೋರಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಯಾವುದೇ ಕೆಲಸ ಮಾಡಿದ್ರು ಕೈಗೂಡುತ್ತಿಲ್ಲ. 2 ವರ್ಷಗಳ ಹಿಂದೆ ತಂದೆ ಕೋವಿಡ್‌ನಿಂದಾಗಿ ಕಾಲವಾದರು. ಈಗ ಮನೆಯಲ್ಲಿ ನನ್ನ ತಾಯಿ ತಮ್ಮನ ಜೊತೆ ಇದ್ದೇನೆ. ಇಬ್ಬರೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ತಂದೆ ಖಾಸಗಿ ಶಿಕ್ಷಕರಾಗಿ ನಂತರ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಯಾವುದೇ ಆಸ್ತಿ ಮಾಡಲಿಲ್ಲ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈಗ ನಮ್ಮ ಪರಿಸ್ಥಿತಿ ನೋಡಿ, ನನ್ನ ತಂದೆ ಹತ್ತಿರ ಕೆಲಸ ಮಾಡಿಸಿಕೊಂಡವರೆಲ್ಲರೂ ನಗುತ್ತಿದ್ದಾರೆ. ಜೀವನದ ಪ್ರತಿ ಕ್ಷಣದಲ್ಲಿಯೂ ನಮ್ಮ ತಂದೆಗೆ ಬಹಳ ಮೋಸ ಆಯಿತು, ನನಗೂ ಕೂಡ ಆಗ್ತಿದೆ. ದಯವಿಟ್ಟು ದಾರಿ ತೋರಿಸಿ ಗುರೂಜಿ.
ಜನ್ಮದಿನಾಂಕ : 11-02-1990 ನಕ್ಷತ್ರ: ಮಖಾ

ಪರಿಹಾರ: ನೀವು ಅನ್ಯಧರ್ಮಿಯರಾದರೂ ನಮ್ಮ ಜ್ಯೋತಿಷ ಶಾಸ್ತ್ರದ ಮೇಲೆ ನಂಬಿಕೆ ಇಟ್ಟು ಪ್ರಶ್ನೆ ಕೇಳಿದ್ದೀರಿ. ನೀವು ನೀಡಿದ ಮಾಹಿತಿ ಪ್ರಕಾರ ನಿಮ್ಮದು ಮಖಾ ನಕ್ಷತ್ರ ಸಿಂಹ ರಾಶಿ ಎಂದುಕೊಳ್ಳಬಹುದು. ಎಲ್ಲರ ಧರ್ಮವೂ ಒಂದೇ. ಆದರೆ ನಾಮ ಹಲವು. ಆದರೆ ಯಾರೂ ಸ್ವಧರ್ಮವನ್ನು ಬಿಡಬಾರದು. ನಿಮಗೆ ಈಗ ಒದಗಿ ಬಂದಿರುವ ಕಷ್ಟಗಳೆಲ್ಲವೂ ತಾತ್ಕಾಲಿಕವಾದವು. ಪರಮಾತ್ಮ ಎಂದಿಗೂ ನಿಮ್ಮ ಕೈ ಬಿಡಲಾರ. ಜನವರಿ 17 ರ ನಂತರ ನಿಮಗೆ ಆತನೇ ದಾರಿ ತೋರಿಸುತ್ತಾನೆ. ಸಾಧ್ಯವಾದರೆ ಶುಕ್ರವಾರದಂದು ಬಿಳಿ ಬಟ್ಟೆಯನ್ನು, ಅಕ್ಕಿಯನ್ನು ಬಡವರಿಗೆ ದಾನ ಮಾಡಿ.‌ ಕಲಬುರಗಿಯ ಹಜರತ್ ಖ್ವಾಜಾ ಬಂದೆ ನವಾಜ್‌ರ ದರ್ಗಾಕ್ಕೆ ಭೇಟಿ ನೀಡಿ. ಚಿಂತೆ ಮಾಡಬೇಡಿ, ನಿಮಗೆ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version