Site icon Vistara News

Astrology Answers | ನಾನು ಬಿಸ್ನೆಸ್‌ ಮಾಡಬೇಕೆಂದುಕೊಂಡಿದ್ದೇನೆ, ಯಶಸ್ವಿಯಾಗುತ್ತೇನೆಯೇ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಹೊಸ ಬಿಸ್ನೆಸ್‌ ಮಾಡಬೇಕು ಅಂದುಕೊಂಡಿದ್ದೇನೆ. ಯಶಸ್ವಿಯಾಗುತ್ತೇನೆಯೇ ದಯವಿಟ್ಟು ತಿಳಿಸಿ. ಹಾಗೆಯೇ ಆಹಾರ ಅಥವಾ ಬಟ್ಟೆ ಅಂಗಡಿ ಇದರಲ್ಲಿ ಯಾವುದು ಮಾಡುವುದು ತಿಳಿಸಿ.
ಜನ್ಮದಿನಾಂಕ : 19-07-1983 ನಕ್ಷತ್ರ: ಚಿತ್ತಾ

ಪರಿಹಾರ: ಚಿತ್ತಾ ನಕ್ಷತ್ರ ಕನ್ಯಾ ರಾಶಿಯವರಿಗೆ ಪಂಚಮ ಶನಿ ಕಳೆದು 6ನೇ ಮನೆಯಾದ ಸ್ವಕ್ಷೇತ್ರಕ್ಕೆ ಶನಿ ಬಂದಿರುವ ಈ ಸಮಯದಲ್ಲಿ ನೀವು ಉತ್ತಮ ರೀತಿಯಲ್ಲಿಯೇ ಯಾವುದೇ ವ್ಯಾಪಾರವನ್ನಾದರೂ ಮಾಡಬಹುದು. ಆದರೆ ಶ್ರದ್ಧೆಯಿಂದ ಮಾಡಬೇಕು. ಹೀಗೆ ಮಾಡಿದ ಯಾವುದೇ ವ್ಯಾಪಾರವಾದರೂ ನಿಮ್ಮ ಕೈ ಹಿಡಿದು, ಜೀವನದಲ್ಲಿ ಸಂತೋಷ ಕೊಡುತ್ತದೆ. ವಸ್ತ್ರ ವಿನ್ಯಾಸದಲ್ಲಿ ಪರಿಣತಿ ಇದ್ದಾರೆ ಮಾತ್ರವೇ ನೀವು ಬಟ್ಟೆ ವ್ಯಾಪಾರದಲ್ಲಿ ಉನ್ನತಿ ಕಾಣಬಹುದು. ಯಾವುದೇ ವ್ಯಾಪಾರ ಮಾಡುವುದಕ್ಕೂ ಅನುಭವದ, ಒಳಗುಟ್ಟು, ಲಾಭ-ನಷ್ಟದ ಲೆಕ್ಕಾಚಾರಗಳನ್ನು ತಿಳಿದುಕೊಂಡಿರಬೇಕು. ನಿಮಗೆ ಯಾವ ವ್ಯವಹಾರ ಚೆನ್ನಾಗಿ ಗೊತ್ತಿದೆಯೋ ಅದೇ ವ್ಯಾಪಾರವನ್ನು ಆರಂಭಿಸಿ. ಶುಕ್ರ ಸಪ್ತಮದಲ್ಲಿ ಇರುವುದರಿಂದ ಯಾವ ವ್ಯಾಪಾರಕ್ಕೆ ನೀವು ಕೈ ಹಾಕಿದರೂ ಯಶಸ್ವಿಯಾಗಿ ನಡೆಯುತ್ತದೆ. ದುರ್ಗೆಯನ್ನು ಪೂಜಿಸಿ, ಪ್ರಾರ್ಥಿಸಿ. ಶುಭವಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version