Site icon Vistara News

Astrology Answers | ವ್ಯಾಪಾರದಲ್ಲಿ ನಷ್ಟವಾಗಿ ಅಂಗಡಿ ಮುಚ್ಚಿದ್ದೇನೆ, ಸಾಲ ಯಾವಾಗ ತೀರುತ್ತದೆ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಿದೆ. ಹೀಗಾಗಿ ಈಗ ಅಂಗಡಿ ಮುಚ್ಚಿದ್ದೇನೆ. ಸುಮಾರು ಏಳು ಲಕ್ಷ ರೂಪಾಯಿ ಸಾಲ ಇದೆ. ಈಗ ಸಂಪಾದನೆ ಇಲ್ಲದೆ ಮನೆಯಲ್ಲಿ ಇದ್ದೀನಿ. ದಯವಿಟ್ಟು ನನ್ನ ಕಷ್ಟಗಳಿಗೆ ಪರಿಹಾರ ಸೂಚಿಸಿ ಗುರೂಜಿ. ಎಂದು ನನ್ನ ಸಾಲ ತೀರಿ ಅಂಗಡಿ ಪುನಃ ಆರಂಭ ಮಾಡುವಂತಾಗುತ್ತದೆ ಹೇಳಿ.
ಜನ್ಮದಿನಾಂಕ : 22-11-1971 ನಕ್ಷತ್ರ: ರೋಹಿಣಿ

ಪರಿಹಾರ: ರೋಹಿಣಿ ನಕ್ಷತ್ರದವರಿಗೆ ಏಪ್ರಿಲ್ 13ರ ವರೆಗೂ ಗುರುವು ಏಕಾದಶ ದಲ್ಲಿ ಇದ್ದು, ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ, ಹೆಚ್ಚಿನ ಶ್ರಮವಹಿಸಿದಲ್ಲಿ ಸತ್ಪಲ ನೀಡುತ್ತಾನೆ. ನಿಮ್ಮ ಸಾಲವೂ ತೀರುತ್ತದೆ. ಕೆಲಸವು ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲು ಆ ಕ್ಷೇತ್ರದಲ್ಲಿ ನೀವು ಪರಿಣತಿ ಹೊಂದಿ, ನಂತರ ಮುಂದುವರಿಯಿರಿ. ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನ ಮಾಡಿ ಬನ್ನಿ. ಪ್ರತಿ ಶುಕ್ರವಾರ ಲಕ್ಷ್ಮೀಯನ್ನು ಅಷ್ಟೋತ್ತರದಿಂದ ಪೂಜಿಸಿ. ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version