Site icon Vistara News

Astrology Answers | ನನ್ನ ವಿವಾಹ ಯಾವಾಗ ಆಗುತ್ತದೆ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ವಿವಾಹ ಯಾವಾಗ ಆಗಬಹುದು ಹೇಳಿ ಗುರೂಜಿ? 5 ವರ್ಷದಿಂದ ಪ್ರಯತ್ನಮಾಡ್ತಿದ್ದಾರೆ ಆದರೂ ಆಗ್ತಿಲ್ಲ, ಪರಿಹಾರ ತಿಳಿಸಿ ಗುರುಗಳೇ?
ಜನ್ಮದಿನಾಂಕ : 25-9-1995 ನಕ್ಷತ್ರ: ಹಸ್ತಾ

ಪರಿಹಾರ: ಕನ್ಯಾ ರಾಶಿಯವರಿಗೆ ಇದೇ ತಾನೇ ಪಂಚಮ ಶನಿ ಮುಗಿದಿದೆ. ಶನಿ ಆರನೇ ಮನೆಗೆ ಬಂದಿದ್ದಾನೆ. ಈಗ ಗುರು ಸಪ್ತಮದಲ್ಲಿದ್ದು, ವಿಶೇಷ ಫಲ ನೀಡುತ್ತಾನೆ. ನಿಮ್ಮ ವಿವಾಹ ನಡೆಯುವ ಕಾಲವು ಕೂಡಿ ಬಂದಿದೆ. ಪ್ರತಿ ಮಂಗಳವಾರ ಒಟ್ಟು ಒಂಬತ್ತು ವಾರಗಳ ಕಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆದು ಬನ್ನಿ. ಜತೆಗೆ ಕೈಲಾದ ಸೇವೆ ಸಲ್ಲಿಸಿ. ಮದುವೆಯಾದ ಮೇಲೆ ಶಾಸ್ತ್ರೋಕ್ತವಾಗಿ ಕಲ್ಯಾಣೋತ್ಸವ ಮಾಡುತ್ತೇನೆ ಎಂದು ಪ್ರಾರ್ಥನೆ ಇರಿಸಿದರೆ ನಿಮ್ಮ ಮದುವೆಯು ಆಗಿ, ಬಾಳನ್ನು ಸುಖವಾಗಿಸುವ ಸಂಗಾತಿ ದೊರೆಯುತ್ತಾರೆ. ಶುದ್ಧ ಸಂಕಲ್ಪದಲ್ಲಿ ನಿಮ್ಮನ್ನು ಅಗ್ನಿಸಾಕ್ಷಿಯಾಗಿ ಕೈಹಿಡಿದ ಧರ್ಮಪತ್ನಿಗೆ ಯಾವ ಯಾತನೆಯನ್ನೂ ಕೊಡದೆ ಪ್ರೀತಿ, ಅಕ್ಕರೆಯನ್ನು ಕೊಟ್ಟು, ಕಾಪಾಡಿ. ಮದುವೆಯು ನಿಗದಿಯಾದ ಮೇಲೆ ನಮ್ಮನ್ನು ಕರೆಯಲು ಮರೆಯಬೇಡಿ!

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version