Site icon Vistara News

Astrology Answers | ಬಿಇ ಮಾಡಿರುವ ಮಗಳಿಗೆ ಸರ್ಕಾರಿ ಕೆಲಸ ಸಿಗುತ್ತದೆಯೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಮಗಳು ಬಿಇ ಮುಗಿಸಿದ್ದಾಳೆ. ಕೆಲಸ ಹುಡುಕುತ್ತಿದ್ದಾಳೆ. ಸರ್ಕಾರಿ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಅವಳಿಗೆ ಸರ್ಕಾರಿ ಕೆಲಸ ಸಿಗುತ್ತದೆಯೇ? ಅವಳ ಮುಂದಿನ ಜೀವನ ಹೇಗಿದೆ ಗುರೂಜಿ?
ಜನ್ಮದಿನಾಂಕ : 11-06-1999 ನಕ್ಷತ್ರ: ಕೃತಿಕಾ

ಪರಿಹಾರ: ಕೃತಿಕಾ ನಕ್ಷತ್ರ ಮೇಷ ರಾಶಿಯವರಿಗೆ ತಾತ್ಕಾಲಿಕವಾಗಿ ಗುರುಬಲವಿಲ್ಲ. ದ್ವಾದಶದಲ್ಲಿ ಗುರು ಇರುವುದರಿಂದ ಯಾವುದೇ ಶುಭ ಕಾರ್ಯ ನಡೆಸಲು ಬರುವುದಿಲ್ಲ, ಗುರು ಶುಭ ಫಲ ನೀಡುವುದಿಲ್ಲ. ಗುರುವಿನ ಹಿಂದೆಯೇ ಅಂದರೆ ಹತ್ತನೇ ಮನೆಯಲ್ಲಿ ಶನಿ ಇದ್ದಾನೆ. ಆತ ಮೀನ ಬಿಟ್ಟು ಮೇಷ ರಾಶಿಗೆ ಬಂದಾಗ ಎಲ್ಲವೂ ನಿಮ್ಮ ಮಗಳ ಕನಸಿನಂತೆಯೇ ನಡೆಯುತ್ತದೆ. ಅಲ್ಲಿಯವರೆಗೆ ನೀವು ಕಾಯಲೇಬೇಕು.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?

Exit mobile version