Site icon Vistara News

Astrology Answers : ನನಗೆ ಸರ್ಕಾರಿ ಕೆಲಸ ಸಿಗುತ್ತದೆಯಾ ಅಥವಾ ವ್ಯಾಪಾರ ಮಾಡಲಾ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಮಸ್ತೆ ಗುರೂಜಿ, ಸರ್ಕಾರಿ ಕೆಲಸಕ್ಕೆ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಸರ್ಕಾರಿ ಕೆಲಸ ಸಿಗುತ್ತದೆಯಾ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ತಿಳಿಸಿ. ಒಂದು ವೇಳೆ ಇಲ್ಲವಾದರೆ ಯಾವ ವ್ಯಾಪಾರ ಮಾಡಿದರೆ ಬೆಳವಣಿಗೆಯಾಗಬಹುದು ಎಂಬುದನ್ನೂ ದಯವಿಟ್ಟು ತಿಳಿಸಿ.
ಜನ್ಮದಿನಾಂಕ : 01-07-1990 ನಕ್ಷತ್ರ: ಶತಭಿಶ
(ನೀವು ಕಳುಹಿಸಿದ್ದ ರಾಶಿ-ನಕ್ಷತ್ರ ತಪ್ಪಾಗಿತ್ತು)

ಪರಿಹಾರ: ಜನ್ಮ ಶನಿಯು ಶತಬಿಷ ನಕ್ಷತ್ರದವರಿಗೆ ಇನ್ನೂ ಎರಡು ವರ್ಷ ಕಾಲ ಅಲ್ಲೇ ಇದ್ದು, ಶತಭಿಷ ನಕ್ಷತ್ರ ಬಿಡುವರೆಗೂ ನಿಮಗೆ ಬೇಕಾದ ಫಲ ಸಿಗುವುದು ಕಷ್ಟ ಸಾಧ್ಯ. ಶನಿ ಅಷ್ಟೋತ್ತರ ಪಠಿಸಿ. ಈಶ್ವರನ ಸನ್ನಿಧಿಯಲ್ಲಿ ಎಳ್ಳು ದೀಪ ಹಚ್ಚಿ, ಈಶ್ವರನ ಸ್ವರೂಪವಾದ ಮಲ್ಲಿಕಾರ್ಜುನ ದರ್ಶನ ಪಡೆದು, ಪಾಪ ಕಳೆದುಕೊಳ್ಳಿ. ಶನಿ ಸಂಚಾರ ನಡೆಯುವಾಗ ಕರಾರುವಕ್ಕಾಗಿ ಇದೇ ಕೆಲಸ ಸಿಗುತ್ತದೆ ಎಂದು ಹೇಳುವುದು ಕಷ್ಟ. ನಿಮ್ಮ ಅಪೇಕ್ಷಿತ ಫಲವನ್ನು ದೇವರೇ ನಡೆಸಿಕೊಡುತ್ತಾರೆ. ನಿಮ್ಮ ಪ್ರಯತ್ನ ಮುಂದುವರಿಸಿ, ದೈವ ಬಲ ವೃದ್ಧಿಸಿಕೊಳ್ಳಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version