ಪ್ರಶ್ನೆ: ನನಗೆ ಸರ್ಕಾರಿ ಕೆಲಸ ಪಡೆದು ಜನರ ಸೇವೆ ಮಾಡಬೇಕೆಂದು ಬಹಳ ಆಸೆ ಇದೆ. ಸರ್ಕಾರಿ ಉದ್ಯೋಗ ದೊರೆಯುತ್ತದೆಯೇ ಗುರೂಜಿ?
ರಾಶಿ: ವೃಷಭ ನಕ್ಷತ್ರ: ರೋಹಿಣಿ
ಪರಿಹಾರ: ನಿಮಗೆ ಏಕಾದಶದಲ್ಲಿ ಗುರು ಸ್ಥಿತನಾಗಿದ್ದು, ದಶಮದಲ್ಲಿ ಶನಿಯು ಇರುವುದರಿಂದ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನ ಮಾಡುತ್ತಲೇ ಇರಿ. ಆಲಸ್ಯ, ಅಸಡ್ಡೆಯನ್ನು ಬಿಟ್ಟು ಶ್ರೀ ಸುಬ್ರಹ್ಮಣ್ಯ ದೇವರನ್ನು ಅನಂತವಾಗಿ ಪೂಜಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ರದ್ಧೆಯಿಂದ ಪ್ರಯತ್ನ ಮಾಡಿದರೆ ಗ್ರಹಸ್ಥಿತಿ ಅನುಕೂಲಕರವಾಗಿರುವಾಗ ನೌಕರಿಯು ದೊರೆಯುತ್ತದೆ. ಮನುಷ್ಯನಿಗೆ ಗುರಿಯಿರಬೇಕು, ಗುರುವಿನ ಅನುಗ್ರಹವಿರಬೇಕು. ನಿಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ನಿರಾಶೆ ಬಿಟ್ಟು ಸತ್ಯ ಸಂಕಲ್ಪದ ಪ್ರಯತ್ನದಿಂದ ನೌಕರಿ ಸಿಗುತ್ತದೆ. ಇಡುಗುಂಜಿಯ ಗಣಪತಿಗೆ ನೌಕರಿ ಸಿಕ್ಕ ಮೇಲೆ ಕೈಲಾದ ಸೇವೆ ಮಾಡುತ್ತೇನೆಂದು ಪ್ರಾರ್ಥನೆ ಮಾಡಿಕೊಂಡು ನಿಮ್ಮ ಪ್ರಯತ್ನ ಮುಂದುವರಿಸಿ. ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?