ಪ್ರಶ್ನೆ: ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದೇನೆ. ಏನು ಮಾಡಿದರೂ ತೀರಿಸಲು ಆಗುತ್ತಿಲ್ಲ. ಪರಿಹಾರ ತಿಳಿಸಿ ಗುರುಗಳೇ..
ಜನ್ಮದಿನಾಂಕ : 12/4/1979 ನಕ್ಷತ್ರ: ಉತ್ತರಾಭಾದ್ರ, ರಾಶಿ: ಮೀನ
ಪರಿಹಾರ: ಉತ್ತರಭಾದ್ರಾ ನಕ್ಷತ್ರ ಮೀನ ರಾಶಿಯಲ್ಲಿ ಜನಿಸಿದ ನಿಮಗೆ ಈಗ ದ್ವಾದಶದಲ್ಲಿ ಗುರುವಿದೆ. ಗುರು ಏಕಾದಶದಲ್ಲಿ ಇದ್ದಾಗ ನೀವು ಪೂರ್ಣಪ್ರಮಾಣದ ಪ್ರಯತ್ನ ಮಾಡಿ ಸಾಲವನ್ನು ತೀರಿಸುವ ಕಡೆಗೆ ಗಮನ ಹರಿಸಬೇಕಾಗಿತ್ತು. ಆದರೆ ಸಮಯ ಇನ್ನೂ ಮೀರಿಲ್ಲ. ನೀವು ಮಾಡುವ ಉದ್ಯೋಗದಲ್ಲಿ ಆಗಲಿ ಅಥವಾ ವ್ಯಾಪಾರ ದಲ್ಲಾಗಲಿ ಬಂದಂತಹ ಹಣದಿಂದ ಸ್ವಲ್ಪಮಟ್ಟಿಗೆ ಸಾಲ ತೀರಿಸಿಕೊಳ್ಳಬೇಕಾಗಿತ್ತು. ಶನಿಯು ಇನ್ನೂ ಏಕಾದಶದಲ್ಲಿ ಇರುವುದರಿಂದ ನಿಮ್ಮ ಸಾಲದ ಹೊರೆಯೂ ಕಡಿಮೆಯಾಗಿ ಆರ್ಥಿಕವಾಗಿ ಸದೃಢರಾಗುತ್ತೀರಾ. ಧರ್ಮಸ್ಥಳ ಮಂಜುನಾಥನನ್ನು ದರ್ಶಿಸಿ ಕೈಲಾದ ಸೇವೆ ಮಾಡುವೆನೆಂಬ ಪ್ರಾರ್ಥನೆ ಇಟ್ಟು ಬನ್ನಿ. ಋಣ ಮುಕ್ತರಾಗಿ ಸುಖಜೀವನ ಕಾಣುವಿರಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.