ಪ್ರಶ್ನೆ: ನನಗೆ ಮುಂದೆ ಒಳ್ಳೆಯ ನೌಕರಿ ಸಿಗುತ್ತದೆಯೇ?
ಜನ್ಮದಿನಾಂಕ : ೨೦/೮/೨೦೦೫ ನಕ್ಷತ್ರ: ಧನಿಷ್ಠ, ರಾಶಿ: ಕುಂಭ
ಪರಿಹಾರ: ಉತ್ತರಾಷಾಡ ನಕ್ಷತ್ರಕ್ಕೆ ಐದು ವರ್ಷಗಳ ಶನಿ ಸಂಚಾರವು ಕಡೆಯ ಹಂತದಲ್ಲಿ ಇದ್ದು, ಶನಿ ಕುಂಭ ರಾಶಿಯಲ್ಲಿ ಇದ್ದಾನೆ. ಸಾಮಾನ್ಯವಾಗಿ ಶನಿಯ ಕಡೆಯ ಸಂಚಾರದಲ್ಲಿ ಈ ಹಿಂದೆ ಬಂದಂಥ ಕಷ್ಟ ಕೊಡುವುದಿಲ್ಲ. ನಿಮ್ಮ ಪೂರ್ವ ಪುಣ್ಯಕ್ಕೆ ಅನುಗುಣವಾಗಿ ಧರ್ಮ ಕರ್ಮಾಧಿಪತಿ ಆಗಿ ಶನಿಯು ಒಳ್ಳೆಯ ಫಲ ನೀಡುತ್ತಾನೆ. ಶನಿ ಮಹಾರಾಯ ಶಿವ ಭಕ್ತರನ್ನು ಎಂದು ಕೆಣಕುವುದಿಲ್ಲ. ಯಾರಿಗೆ ಆದರೂ ಅಷ್ಟಮ, ಪಂಚಮ, ಚತುರ್ಥ, ಸಾಡೇಸಾತಿ ಶನಿ ಬಂದಾಗ ಈಶ್ವರನನ್ನು ಅರ್ಚಿಸಿ ಎಲ್ಲವೂ ಸತ್ಫಲಕ್ಕೆ ತಿರುಗಿ ಅಭೀಷ್ಟ ಸಿದ್ಧಿಸುತ್ತದೆ. ಗಣಪತಿಯನ್ನು ಪೂಜಿಸಿ. ಒಳ್ಳೆಯ ನೌಕರಿ ಸಿಗಲಿ ಎಂದು ಇಡಗುಂಜಿ ಗಣಪತಿಗೆ ಪ್ರಾರ್ಥನೆ ಮಾಡಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.