ಪ್ರಶ್ನೆ: ಮನೆ ಕಟ್ಟಲು ಬಹಳ ಸಾಲ ಮಾಡಿಕೊಂಡಿದ್ದೇನೆ. ಯಾವಾಗ ಈ ಸಾಲದಿಂದ ಮುಕ್ತಿ ಪಡೆಯಬಹುದು ಗುರೂಜಿ?
ರಾಶಿ: ವೃಶ್ಚಿಕ ನಕ್ಷತ್ರ: ಅನುರಾಧ
ಪರಿಹಾರ: ಮನೆಯನ್ನು ಕಟ್ಟಲು ಸಾಲವನ್ನು ಪಡೆಯುವುದು ಸಹಜವಾದ ಪ್ರಕ್ರಿಯೆ. ಇಷ್ಟೇ ಹಣವನ್ನು ಇಟ್ಟುಕೊಂಡು ಮನೆ ಕಟ್ಟುತ್ತೇನೆಂದರೆ ಅದು ಸಾಧ್ಯವಾಗದ ಮಾತು. ಪಂಚಮದಲ್ಲಿ ಗುರು ಇರುವುದರಿಂದ ಸಾಲದ ಹೊರೆ ಕಡಿಮೆಯಾಗಿ ಮುಂದಿನ ದಿನಗಳು ಕಳೆದಂತೆ ಅನುಕೂಲವಾದ ವಾತಾವರಣವನ್ನು ನೀವು ಕಾಣಬಹುದು. ಸಾಲವನ್ನು ಮಾಡಿದ ಮೇಲೆ ಅದನ್ನು ನೀವು ತೀರಿಸಲೇಬೇಕು. ಸಾಲ ಇರುವವರೆಗೂ ಎಲ್ಲ ಖರ್ಚು ವೆಚ್ಚ ಕಡಿಮೆ ಮಾಡಿ ಸಾಲವನ್ನು ತೀರಿಸಲು ಮುಂದಾಗಿ. ಸಾಧ್ಯವಾದಲ್ಲಿ ಒಂದು ಆಸ್ತಿಯನ್ನು ಮಾರಿ ಪೂರ್ತಿ ಸಾಲವನ್ನು ತೀರಿಸಿ, ಇನ್ನೊಂದನ್ನು ಬಂಡವಾಳವಾಗಿಟ್ಟುಕೊಂಡು ಹಣ ಪಡೆಯಬಹುದು. ಕುಲ ದೇವರ ಅನುಗ್ರಹ, ಮಹಾಕ್ಷ್ಮೀ ಕಟಾಕ್ಷಕ್ಕಾಗಿ ಪ್ರಾರ್ಥಿಸಿ. ಪ್ರತಿ ಶುಕ್ರವಾರ ಸಂಜೆ ಶಾರದಾ ದೇವಿಯನ್ನು ಪೂಜಿಸಿ, ಪ್ರಾರ್ಥಿಸಿ. ಸಾಲ ತೀರಿಸಲು ಧನವನ್ನು ನೀಡಿ ಅನುಕೂಲಮಾಡಿಕೊಡೆಂದು ಬೇಡಿಕೊಳ್ಳಿ. ಹೆದರಬೇಡಿ, ಗ್ರಹಾನುಕುಲವು ಇರುವುದರಿಂದ ಮುಂದೆ ನಿಮಗೆ ಒಳ್ಳೆಯ ದಿನಗಳು ಕಾದಿವೆ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?