Site icon Vistara News

Astrology Answers : ಕಷ್ಟ ಕಳೆದು ನೆಮ್ಮದಿಯ ದಿನಗಳು ಎಂದು ಬರುತ್ತವೆ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಜೀವನದಲ್ಲಿ ಸುಖವೆಂಬುದೇ ಇಲ್ಲ. ಯಾವಾಗಲೂ ಒಂದಲ್ಲಾ ಒಂದು ಕಷ್ಟ ಇದ್ದೇ ಇದೆ. ನನಗೆ ನೆಮ್ಮದಿಯ ದಿನಗಳು ಎಂದು ಬರುತ್ತವೆ ಗುರೂಜಿ?
ರಾಶಿ: ಮೀನ ನಕ್ಷತ್ರ: ಉತ್ತರಾಭಾದ್ರ

ಪರಿಹಾರ: ಜನವರಿ 17ರಿಂದ ಉತ್ತರಾಭಾದ್ರ ನಕ್ಷತ್ರದ ನಿಮಗೆ ಏಳುವರೆ ವರ್ಷದ ಶನಿ ಸಂಚಾರವು ಆರಂಭವಾಗಿದೆ. ಈ ಆರಂಭಕಾಲದಲ್ಲಿ ಹೆಚ್ಚು ತಾಪತ್ರಯ ಇರುವುದಿಲ್ಲ. ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳಲು ಗುರುವು ಸಹಕಾರ ನೀಡುತ್ತಾನೆ. ಏಪ್ರಿಲ್‌ ನಂತರದಲ್ಲಿ ಗುರುವಿನಿಂದಾಗಿ ನೀವು ಹೆಚ್ಚು ಸುಖ, ಲಾಭ, ಸಂತೋಷ ಪಡೆಯುವ ಕಾಲವು ಬರುತ್ತದೆ. ನಿಮ್ಮ ಇಷ್ಟಾರ್ಥ ಈಡೇರಿಸುವ ದೇವರೆಂದರೆ ಶಿವ ಮತ್ತು ಸುಬ್ರಹ್ಮಣ್ಯ ದೇವರು. ಪ್ರತಿ ಶನಿವಾರದಂದು ಶನಿ ಅಷ್ಟೋತ್ತರವನ್ನು ಮಂಗಳವಾರದಂದು ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಪಾರಾಯಣ ಮಾಡಿ, ಶನಿವಾರದಂದು ಶನೈಶ್ವರನ ದರ್ಶನ ಪಡೆಯಿರಿ. ಮಂಗಳವಾರದಂದು ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ. ಇದರಿಂದ ನಿಮಗೆ ನೀವು ಕಳೆದುಕೊಂಡಿರುವ ಸುಖ-ಶಾಂತಿಯು ದೊರೆತು, ನೆಮ್ಮದಿಯ ದಿನಗಳನ್ನು ಕಾಣಬಹುದು.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version