ಪ್ರಶ್ನೆ: ಮದುವೆಯಾಗಬೇಕೆಂದು ಬಹಳ ದಿನಗಳಿಂದ ಪ್ರಯತ್ನ ಪಡುತ್ತಿರುವೆ. ನನ್ನ ಪೋಷಕರು ಬಹಳ ಪ್ರಯತ್ನ ಪಟ್ಟಿದ್ದಾರೆ. ನನಗೆ ಯಾವಾಗ ಮದುವೆಯ ಯೋಗ ಇದೆ ತಿಳಿಸಿ ಗುರೂಜಿ
ರಾಶಿ: ಧನಸ್ಸು ನಕ್ಷತ್ರ: ಪೂರ್ವಾಷಾಢ
ಪರಿಹಾರ: ಪೂರ್ವಾಷಾಢ ನಕ್ಷತ್ರದ ನಿಮಗೆ ಶನಿ ಸಂಚಾರವು ಕಳೆದ ಜನವರಿ 17 ಕ್ಕೆ ಅಂತ್ಯಕಂಡು ಒಳ್ಳೆಯ ಕಾಲ ಆರಂಭವಾಗಿದೆ. ಹೋಗುವಾಗ ಶನಿಯು ನಿಮ್ಮ ಧರ್ಮ, ಕರ್ಮಗಳನ್ನು ನೋಡಿಕೊಂಡು ನಿಮಗೆ ಬೇಕಾದ್ದನ್ನು ಕೊಡುತ್ತಾನೆ. ನಿವು ದೇವ ಭಕ್ತಿಯನ್ನು ಉಳಿಸಿಕೊಂಡು ಮುನ್ನೆಡೆಯಿರಿ. ಮುಂದೆ ಏಪ್ರಿಲ್ 20ರ ನಂತರ ಪಂಚಮಕ್ಕೆ ಗುರು ಬಂದಾಗ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನೀವು ನಿರೀಕ್ಷಿಸುತ್ತಿರುವಂತಹ ವಧು ದೊರೆತು ನಿಮಗೆ ವಿವಾಹ ಏರ್ಪಡಲಿದೆ. ನೀವು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಿರಿ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ಮಾಡುತ್ತೇನೆಂದು ಪ್ರಾರ್ಥನೆ ಮಾಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತದೆ. ಮದುವೆಯಾದ ನಂತರ ನಿಮ್ಮ ಈ ಹರಕೆ ತೀರಿಸಲು ಮರೆಯಬೇಡಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?