ಪ್ರಶ್ನೆ: ಕಳೆದ ಆರು ತಿಂಗಳಿನಿಂದ ಬಹಳ ಕಷ್ಟ ಇದೆ ಗುರೂಜಿ, ಯಾವ ಕೆಲಸ ಮಾಡಿದರು ಕೈಗೂಡುತ್ತಿಲ್ಲ. ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ರಾಶಿ: ಸಿಂಹ ನಕ್ಷತ್ರ: ಮಖಾ
ಪರಿಹಾರ: ಮಖಾ ನಕ್ಷತ್ರದವರಿಗೆ ಸಪ್ತಮದಲ್ಲಿ ಶನಿ ಇದ್ದಾನೆ, ಸ್ವ ಕ್ಷೇತ್ರದಲ್ಲಿದ್ದಾನೆ. ಅಷ್ಟಮದಲ್ಲಿ ಗುರುವಿದ್ದಾನೆ. ಹೀಗಾಗಿ ಎಲ್ಲ ಕಾರ್ಯಗಳೂ ದೈವ ಬಲದಿಂದಲೇ ನಡೆಯಬೇಕು. ಹೆದರಬೇಡಿ, ದೇವರ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾ, ಕೆಲಸದಲ್ಲಿ ಮುನ್ನುಗ್ಗಿ, ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ನಂಬಿಕೆ ಇರಲಿ. ಏಪ್ರಿಲ್ 20 ರ ನಂತರ ಗುರುವು ನವಮಕ್ಕೆ ಬಂದಾಗ ಒಳ್ಳೆಯ ಫಲಗಳನ್ನು ಪಡೆಯಬಹುದು. ನಿತ್ಯ ಗಣಪತಿಯನ್ನು ಪೂಜಿಸಿ, ಪ್ರಾರ್ಥನೆ ಮಾಡಿ. ಸುಬ್ರಹ್ಮಣ್ಯನ ಆರಾಧನೆ ಇರಲಿ, ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?