ಪ್ರಶ್ನೆ: ಮನೆಯಲ್ಲಿ ಮದುವೆಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾವ ಸಂಬಂಧವೂ ಸರಿಹೊಂದುತ್ತಿಲ್ಲ. ಬೇಸರವಾಗಿದೆ, ದಯವಿಟ್ಟು ಮಾರ್ಗದರ್ಶನ ಮಾಡಿ ಗುರೂಜಿ.
ರಾಶಿ: ತುಲಾ ನಕ್ಷತ್ರ: ವಿಶಾಖ
ಪರಿಹಾರ: ನೀವು ಇನ್ನು ಎರಡೂವರೆ ವರ್ಷಗಳ ಕಾಲ ಪಂಚಮ ಶನಿಯ ಸಂಕೋಲೆಯಲ್ಲಿ ಇರುತ್ತೀರಿ. ನೀವು ಏಪ್ರಿಲ್ ತಿಂಗಳಲ್ಲಿ ಗುರು ಸಂಚಾರದಿಂದ ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದು. ತುಲಾ ರಾಶಿಯಲ್ಲಿ ಜನಿಸಿದ ನಿಮಗೆ ಎಪ್ರಿಲ್ 21ರ ನಂತರ ಗುರುವು ಸಪ್ತಮಕ್ಕೆ ಬಂದು ನಿಮ್ಮೆಲ್ಲ ಪ್ರಯತ್ನ ಕೈಗೂಡುವಂತೆ ಮಾಡುತ್ತಾನೆ. ನಿಮ್ಮ ಮನಸ್ಸಿಗೆ ಒಪ್ಪುವಂತಹ ವಧುವೇ ಸಿಕ್ಕಿ ನಿಮ್ಮ ವಿವಾಹವೂ ನಡೆಯುತ್ತದೆ. ನಂಜನಗೂಡಿಗೆ ತೆರಳಿ ನಂಜುಂಡೇಶ್ವರನ ದರ್ಶನ ಪಡೆಯಿರಿ. ಸಾಧ್ಯವಿದ್ದರೆ ಮದುವೆಯ ನಂತರ ಗಿರಿಜಾ ಕಲ್ಯಾಣ ಮಾಡಿಸುವೆನೆಂಬ ಹರಕೆ ಇಡಿ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?