ಪ್ರಶ್ನೆ: ತೀವ್ರ ಹಣಕಾಸು ಸಮಸ್ಯೆ ಇದೆ. ಜೊತೆಗೆ ತಂದೆಯವರ ಅಸಹಕಾರ. ಅಲ್ಲದೆ, ಅಸ್ತಿ ವಿಚಾರದಲ್ಲಿ ಗೊಂದಲವಿದೆ. ಸಣ್ಣ ಜಾಗ ಮಾರಬೇಕೆಂದು ಕೊಂಡಿದ್ದೇನೆ. ಅದರೆ ತಂದೆಯ ವಿರೋಧವಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ, ದಯವಿಟ್ಟು ಪರಿಹಾರ ತಿಳಿಸಿ.
ರಾಶಿ: ಕುಂಭ ನಕ್ಷತ್ರ: ಶತಭಿಷ
ಪರಿಹಾರ: ನಿಮ್ಮದು ಶತಭಿಷ ನಕ್ಷತ್ರ. ಈ ನಕ್ಷತ್ರದವರಿಗೆ ದ್ವಾದಶದಲ್ಲಿ ಶನಿ ಇದ್ದಾಗ ಯಾವ ಶುಭ ಫಲವನ್ನೂ ಕೊಟ್ಟಿರುವುದಿಲ್ಲ. ಅನನ್ಯ ಭಕ್ತಿಯಿಂದ ದೇವರನ್ನು ಪೂಜಿಸಿದರೆ, ಧರ್ಮದಿಂದ ನಡೆದರೆ ತೃಪ್ತಿ ಆಗುವಷ್ಟು ದೈವ ಸಹಕಾರ ಸಿಗುತ್ತದೆ. ಕಷ್ಟ ಬಂದಾಗ ದೇವರ ಮೊರೆ ಹೋಗುವ ಬದಲು, ನಿತ್ಯ ಪ್ರಾರ್ಥನೆ ಮಾಡಿ. ಮನುಷ್ಯನಿಗೆ ಜೀವನದಲ್ಲಿ ಎದುರಾಗುವ ಸವಾಲಯಗಳನ್ನು ದೂರಮಾಡಿಕೊಳ್ಳಲು ಸತತ ಧ್ಯಾನ, ಪೂಜೆ, ಧರ್ಮದ ದಾರಿಯಲ್ಲಿ ನಡೆಯುವುದು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ. ದುಡ್ಡು ಕಾಸಿನ ಸಮಸ್ಯೆಯಿಂದ ಹೊರಬಂದು, ತಂದೆ ಮಕ್ಕಳಲ್ಲಿ ಐಕ್ಯತೆ ಉಂಟಾಗಬೇಕಾದರೆ ದೇವರಲ್ಲಿ ಅನನ್ಯ ಭಕ್ತಿ ಇರಬೇಕು, ನುಡಿದಂತೆ ನಡೆಯುವ, ಧರ್ಮದ ಮಾರ್ಗದಲ್ಲಿ ಜೀವನ ನಡೆಸುವ ಬದ್ಧತೆ ಇರಬೇಕು. ಕುಂಭ ರಾಶಿಗೆ ಇನ್ನೂ ಐದು ವರ್ಷಗಳ ಶನಿ ಸಂಚಾರ ಇದ್ದು, ಶನಿ ಅಷ್ಟೋತ್ತರ ಪಠಿಸಿ. ಪ್ರತಿ ಶನಿವಾರ ಎಳ್ಳು ದೀಪ ಹಚ್ಚಿರಿ. ಅನನ್ಯ ದೈವ ಭಕ್ತಿಯೊಂದೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲದು. ಒಳ್ಳೆಯದಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?