ಪ್ರಶ್ನೆ: ನನ್ನ ಮಗಳಿಗೆ ಓದಿನಲ್ಲಿ ಒಂಚೂರು ಆಸಕ್ತಿ ಇಲ್ಲ. ಹೇಳಿದ ಮಾತು ಕೇಳುವುದೇ ಇಲ್ಲ. ದಯವಿಟ್ಟು ಪರಿಹಾರ ತಿಳಿಸಿ ಗುರೂಜಿ
ರಾಶಿ: ಮಕರ ನಕ್ಷತ್ರ: ಶ್ರವಣ
ಪರಿಹಾರ: ಯಾವಾಗಲು ಓದುವ ಮಕ್ಕಳಿಗೆ ಸಂಕಲ್ಪ ಇರಬೇಕು. ಕಲಿಯದೆ ಏನೂ ಬರುವುದಿಲ್ಲ. ನೀವು ಈ ಬಗ್ಗೆ ಮಗಳೊಂದಿಗೆ ಕುಳಿತು ಮಾತನಾಡಿ, ತಿಳಿಯುವಂತೆ ಹೇಳಿ. ನಿತ್ಯ ಓದು ಓದು ಎಂದು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ನೀವೇ ಅವಳ ಓದಿನ ಕಡೆ ಗಮನ ಹರಿಸಿ. ನಿಮ್ಮ ಮಗಳಿಗೆ ನಿತ್ಯ ಶಾಲೆಗೆ ಹೋಗುವ ಮೊದಲು ಗಣಪತಿಗೆ 21 ಗರಿಕೆ ಇರಿಸಿ ಪೂಜೆ ಮಾಡಲು ಜತೆಗೆ ಸರಸ್ವತಿ ಅಷ್ಟೋತ್ತರ ಪಠಿಸಲು ಹೇಳಿ. ನಿಮ್ಮ ಮಗಳ ಜಾತಕದ ಪ್ರಕಾರ ಇನ್ನೇನು ಶನಿಯ ಸಂಚಾರ ಕಡೆಯ ಭಾಗದಲ್ಲಿದೆ. ಮುಂದೆ ಆಕೆಗೆ ಓದಿನಲ್ಲಿ ಆಸಕ್ತಿ ಹೆಚ್ಚಿ, ವಿದ್ಯಾಭ್ಯಾಸವು ಯಾವುದೇ ಯೋಚನೆ ಇಲ್ಲದೆ ಮುಂದುವರಿಯುತ್ತದೆ. ಆಕೆಗೆ ನಮ್ಮ ಶುಭ ಹಾರೈಕೆಯನ್ನು ತಿಳಿಸಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?