Site icon Vistara News

Astrology Answers : ನನ್ನ ಮದುವೆ ವಿಳಂಬವಾಗುತ್ತಿದೆ, ಏನು ಮಾಡಲಿ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಮದುವೆಯಾಗಬೇಕೆಂದುಕೊಂಡಿದ್ದೇನೆ, ಆದರೆ ಎಲ್ಲೂ ಸಂಬಂಧ ಕೂಡಿ ಬರುತ್ತಿಲ್ಲ. ವಿವಾಹ ವಿಳಂಬವಾಗುತ್ತಲೇ ಇದೆ. ಪರಿಹಾರ ತಿಳಿಸಿ ಗುರೂಜಿ
ರಾಶಿ: ಮಕರ ನಕ್ಷತ್ರ: ಧನಿಷ್ಠ

ಪರಿಹಾರ: ಮಕರ ರಾಶಿಯವರಿಗೆ ಶನಿಯ ಸಂಚಾರವಿದೆ. ಶನಿಯು ಚಂದ್ರನಿಗೆ ದ್ವಾದಶದಲ್ಲಿ, ಲಗ್ನದಲ್ಲಿದ್ದು ವಿವಾಹ ನಡೆಯಲು ಸರಿಯಾದ ಕಾಲ ಇದಲ್ಲ. ನಿಮಗೆ ಸೂಕ್ತವಾದ ವರ ಸಿಗುವುದೂ ಕಷ್ಟ. ಸದ್ಯ ನಿಮ್ಮ ಮದುವೆ ಏರ್ಪಡಲು ದೈವಬಲವಿಲ್ಲ. ಈ ಕೂಡಲೇ ನಿಮ್ಮ ಜಾತಕದೊಂದಿಗೆ ಕುಲ ಪುರೋಹಿತರನ್ನು ಸಂಪರ್ಕಿಸಿ, ಸ್ವಯಂವರ ಪಾರ್ವತಿ ಮಂತ್ರದ ಉಪದೇಶ ಪಡೆದುಕೊಂಡು, ನಿತ್ಯ ಜಪ ಮಾಡಿ. ಆನಂತರದಲ್ಲಿ ಸ್ವಯಂವರ ಪಾರ್ವತಿ ಹವನ ಮಾಡಿದಲ್ಲಿ ಉತ್ತಮ ಅವಕಾಶ ಉದಗಿ ಬರುತ್ತದೆ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version