Site icon Vistara News

Astrology Answers : ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ, ಏನು ಮಾಡುವುದು ತಿಳಿಸಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಗುರೂಜಿ. ಆದರೂ ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ. ಏನು ಮಾಡುವುದು ತಿಳಿಸಿ.
ರಾಶಿ: ಮೀನ ನಕ್ಷತ್ರ: ಪೂರ್ವಭಾದ್ರಾ

ಪರಿಹಾರ: ಪೂರ್ವಭಾದ್ರಾ ನಕ್ಷತ್ರದಲ್ಲಿ ಜನಿಸಿದ ನಿಮಗೆ ಈಗ ತಾನೆ ಶನಿಯ ಸಂಚಾರ ಆರಂಭ ಆಗಿದ್ದು, ವಿದ್ಯೆ ಇದ್ದರೂ ಕೆಲಸ ಸಿಗಲಿಲ್ಲ ಎಂಬ ನಿಮ್ಮ ಮನೋವೇದನೆ ಅರ್ಥವಾಗುತ್ತದೆ. ಆದರೆ ಹೆಚ್ಚಿನ ಪರಿಶ್ರಮ ದಿಂದಲೇ ನಿಮ್ಮ ಆಸೆಯೂ ಪೂರ್ಣಗೊಳ್ಳುವುದು. ಒಳ್ಳೆಯ ಸಮಯಕ್ಕಾಗಿ ಕಾಯಿರಿ. ಆದರೆ ನಿಮ್ಮ ಪ್ರಯತ್ನವನ್ನು ಬಿಡದೆ ಮುಂದುವರಿಸಿ. ಧನಾರ್ಜನೆ ಒಂದನ್ನೇ ಗುರಿಯಾಗಿಟ್ಟುಕೊಳ್ಳದೇ ಹೆಸರು, ಕೀರ್ತಿ ಯನ್ನೂ ಸಂಪಾದಿಸುವತ್ತ ಗಮನ ಹರಿಸಿ. ಶನಿಯು ಮೀನ ರಾಶಿಗೆ ಬಂದಾಗ ನಿಮ್ಮ ಸಮಯವು ಸುಧಾರಿಸುತ್ತದೆ. ಶನಿಯ ಪ್ರಾರ್ಥನೆ ಇರಲಿ. ಪ್ರತಿ ನಿತ್ಯ ರಾಮಾಯಣದ ಸುಂದರಕಾಂಡ ಪಾರಾಯಣ ಮಾಡಿ. ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version