Site icon Vistara News

Astrology Answers : ನಾನು ಮರು ಮದುವೆ ಆಗಬಹುದೇ ಹೇಳಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಮೊದಲ ಮದುವೆ ಮುರಿದು ಬಿದ್ದಿದೆ. ಮರು ಮದುವೆ ಆಗಬಹುದೇ ನೋಡಿ ಹೇಳಿ ಗುರೂಜಿ.
ರಾಶಿ: ಮಕರ ನಕ್ಷತ್ರ: ಧನಿಷ್ಠ

ಪರಿಹಾರ: ಕಾಲಧರ್ಮ ಅನುಸಾರವಾಗಿ ದೇಶ ಕಾಲ, ಸಂದರ್ಭಕ್ಕೆ ಹೊಂದಿಸಿಕೊಂಡು ಮನುಷ್ಯನು ತನ್ನ ಜೀವನ ಸಾಗಿಸಬೇಕೆಂದು ಹಿರಿಯರೇ ಹೇಳಿದ್ದಾರೆ. ಮರು ಮದುವೆಯಾಗುವ ವಿಷಯದಲ್ಲಿ ಹೆಚ್ಚು ಯೋಚಿಸಬೇಡಿ. ಜೀವನದ ಭದ್ರತೆಗಾಗಿ ನೀವು ಮತ್ತೆ ಮದುವೆಯಾಗುವುದರಲ್ಲಿ ತಪ್ಪಿಲ್ಲ. ಮಕರ ರಾಶಿಯವರಿಗೆ ದ್ವಿತೀಯದಲ್ಲಿ ಗುರುವಿದ್ದು, ಜಾತಕದಲ್ಲಿ ಪಂಚಮದಲ್ಲಿ ಗುರುವಿದ್ದಾನೆ. ಇನ್ನೂ ನೀವು ಮಧ್ಯಪ್ರಾಯದವರಾಗಿದ್ದು, ನಿಮ್ಮನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ಅನ್ಯೋನ್ಯವಾಗಿರುತ್ತೇವೆಂದು ಖಾತ್ರಿಯಾಗುವ ಸಂಗಾತಿ ಸಿಕ್ಕರೆ ಮುಂದೆ ಸಾಗಿ, ಗುರು ಸಂರಕ್ಷಣೆ ನೀಡುತ್ತಾನೆ. ಮನುಷ್ಯನು ಒಂಟಿಯಾಗಿ ಬಾಳಲು ಸಾಧ್ಯವಿಲ್ಲ. ಏಕೆಂದರೆ ಆತ ಸಂಘ ಜೀವಿ. ಹೀಗಾಗಿ ನೀವು ಧೈರ್ಯ ಮಾಡಿ ಮುಂದುವರಿಯಿರಿ. ಇದಕ್ಕಾಗಿ ಹಿರಿಯರನ್ನು ಪೂಜಿಸಿ, ಅವರ ಆಶೀರ್ವಾದವನ್ನು, ಸಲಹೆ, ಮಾರ್ಗದರ್ಶನವನ್ನು ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಿ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version