Site icon Vistara News

Astrology Answers | ನನ್ನ ಮಗಳ ಮದುವೆ ಯಾವಾಗ ಆಗುತ್ತದೆ ತಿಳಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಮಗಳ ಬಗ್ಗೆ ಪ್ರಶ್ನೆ ಕೇಳುತ್ತಿರುವೆ ಗುರೂಜಿ, ಅವಳಿಗೆ ಸರ್ಕಾರಿ ಕೆಲಸ ಪಡೆಯಬೇಕೆಂಬ ಆಸೆ, ಅದು ಈಡೇರುತ್ತದೆಯೇ? ಅವಳಿಗೆ ಮದುವೆ ಯಾವಾಗ ಆಗುತ್ತದೆ ತಿಳಿಸಿ.
ಜನ್ಮದಿನಾಂಕ : ೩೦-೩-199೮ ನಕ್ಷತ್ರ: ಭರಣಿ

ಪರಿಹಾರ: ನಾವು ಕೆಲಸವನ್ನು ನಿಷ್ಠೆಯಿಂದ ಶ್ರಮಪಟ್ಟು ಮಾಡಬೇಕು. ಆಗ ಯಾವ ಕೆಲಸವಾದರೂ ನಮಗೆ ಕೀರ್ತಿಯನ್ನು ಯಶಸ್ಸನ್ನು ತರುತ್ತದೆ. ಸರ್ಕಾರಿ ಕೆಲಸವೇ ಬೇಕೆಂದು ಕಾಯದೆ ಮೊದಲು ಸಿಗುವ ಕೆಲಸದಲ್ಲಿ ಶ್ರದ್ಧೆ ಹಾಗೂ ಜಾಣ್ಮೆಯನ್ನು ನಿಮ್ಮ ಮಗಳು ತೋರಿಸಲಿ. ಯಾವುದೇ ಕೆಲಸ ನೀಡಿದರೂ ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲಿ. ಜನವರಿಯಲ್ಲಿ ಹನ್ನೊಂದನೇ ಮನೆಯ ಶನಿ ಸಂಚಾರದ ವೇಳೆ ಆಕೆಗೆ ಒಳ್ಳೆಯ ಕಾಲ ಬರುತ್ತದೆ. ಈ ಸಂದರ್ಭದಲ್ಲಿ ನೀವು ಮದುವೆ ಮಾಡಲೂ ಪ್ರಯತ್ನಿಸಬಹುದು.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?

Exit mobile version