ಪ್ರಶ್ನೆ: ನನಗೆ ನನ್ನ ಮದುವೆಯದೇ ಯೋಚನೆಯಾಗಿದೆ. ಮನೆಯವರು ಒಳ್ಳೆಯ ಹುಡುಗ ಸಿಗಲಿ ಎಂದು ಹುಡುಕಿ ಸೋತಿದ್ದಾರೆ, ನನಗೆ ಯಾವಾಗ ಮದುವೆಯಾಗುತ್ತದೆ ಗುರೂಜಿ?
ರಾಶಿ: ಸಿಂಹ ನಕ್ಷತ್ರ: ಮಘಾ
ಪರಿಹಾರ: ನಿಮ್ಮದು ಮಖಾ ನಕ್ಷತ್ರ. ಸಿಂಹ ರಾಶಿಯವರಿಗೆ ಮುಂದಿನ ಏಪ್ರಿಲ್ 21ರಿಂದ ನವಮಕ್ಕೆ ಗುರುವು ಬರಲಿರುವುದರಿಂದ ಆ ನಂತರ ಮದುವೆಯ ವಿಚಾರದಲ್ಲಿ ಸಾಫಲ್ಯತೆ ಪಡೆಯಬಹುದು. ಬಯಸಿದ್ದೆಲ್ಲ ಸಿಗುವುದು ಅಸಾಧ್ಯ. ಆದರೆ ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡು ನಿಮ್ಮನ್ನು ಸುಖವಾಗಿರಿಸಿಕೊಳ್ಳುವಂತಹ ಹುಡುಗನನ್ನು ನೀವು ವರಿಸುವುದು ಒಳ್ಳೆಯದು. ಸಮಯವು ಚೆನ್ನಾಗಿರುವುದರಿಂದ ನಿಮ್ಮ ಇಚ್ಛೆಯೂ ಈಡೇರುತ್ತದೆ. ಕುಲದೇವರ ದರ್ಶನ ಮಾಡಿಕೊಂಡು ಬನ್ನಿ. ಮದುವೆಯ ನಂತರ ಗಿರಿಜಾ ಕಲ್ಯಾಣ ಮಾಡಿಸುವೆನೆಂಬ ಹರಕೆ ಮಾಡಿಕೊಳ್ಳಿ. ಶುಭವಾಗುವುದು.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?