ಪ್ರಶ್ನೆ: ಮಗಳಿಗೆ ಮದುವೆ ಮಾಡಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದೇವೆ. ಆದರೆ ಸರಿಯಾದ ಸಂಬಂಧ ಕೂಡಿ ಬರುತ್ತಿಲ್ಲ. ಮಗಳ ಮದುವೆ ಯಾವಾಗ ನಡೆಯಬಹುದು ಗುರೂಜಿ.
ರಾಶಿ: ತುಲಾ ನಕ್ಷತ್ರ: ಚಿತ್ತಾ
ಪರಿಹಾರ: ನಿಮ್ಮ ಮಗಳ ಜಾತಕದ ಪ್ರಕಾರ ಚತುರ್ಥದಲ್ಲಿ ಶನಿ, ಷಷ್ಠದಲ್ಲಿ ಗುರುವಿದ್ದಾನೆ. ಹೀಗಾಗಿ ಸಮಯವು ಅವಳ ಪರವಾಗಿ ಸಾಗುತ್ತಿದೆ. ಯಾವುದೇ ಶುಭ ಕಾರ್ಯ ನಡೆಯಲು ಮನೋಬಲದ ಜೊತೆ ದೈವಬಲವೂ ಅತ್ಯಗತ್ಯ. ನೀವು ಈಗಲೇ ವರಾನ್ವೇಷಣೆಯನ್ನು ಜಾಗರೂಕತೆಯಿಂದ ಮಾಡಿದಲ್ಲಿ ಮಗಳ ಮದುವೆ ನಡೆದು, ಆಕೆಯ ಜೀವನವು ಸುಖಮಯವಾಗಿರುತ್ತದೆ. ಮದುವೆಯ ಪ್ರಯತ್ನವನ್ನು ಮುಂದುವರಿಸಿರಿ. ಜತೆಗೆ ಕುಲದೇವರ ಪ್ರಾರ್ಥನೆ ಇರಲಿ. ಮದುವೆಯ ನಂತರ ಗಿರಿಜಾ ಕಲ್ಯಾಣ ಮಾಡಿಸುವೆವೆಂಬ ಹರಕೆ ಇರಿಸಿ. ಕಲ್ಯಾಣವು ಏರ್ಪಡುವುದು. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?