ಪ್ರಶ್ನೆ: ನನಗೆ ಸಿಎ ಆಗಬೇಕೆಂಬ ಆಸೆ ಇದೆ. ಈಗಾಗಲೇ ಪರೀಕ್ಷೆ ಕೂಡ ಬರೆದಿದ್ದೇನೆ. ಆದರೆ ಪಾಸ್ ಆಗುತ್ತಿಲ್ಲ ಗುರೂಜಿ, ದಯವಿಟ್ಟು ಪರಿಹಾರ ತಿಳಿಸಿ.
ರಾಶಿ: ಮಿಥುನ ನಕ್ಷತ್ರ: ಪುನರ್ವಸು.
ಪರಿಹಾರ: ನೀವು ಕೊಟ್ಟಿರುವ ವಿವರಗಳು ಪೂರ್ಣವಾಗಿಲ್ಲವಾದರೂ ನಿಮ್ಮ ಈಗಿನ ಗ್ರಹಸ್ಥಿತಿಯನ್ನು ನೋಡಿದರೆ ಏಪ್ರಿಲ್‌ನಲ್ಲಿ ಗುರು ಗ್ರಹವು ಏಕಾದಶಕ್ಕೆ ಬರಲಿದ್ದು, ನೀವು ಯಾವ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರೂ ಯಶಸ್ಸು ಸಾಧಿಸುತ್ತೀರಿ. ಓದಿನಲ್ಲಿ ಏಕಾಗ್ರತೆ, ನಿರಂತರ ಶ್ರಮವಿರಲಿ. ಸರಿಯಾದ ಸಿದ್ಧತೆ ನಡೆಸಿದಲ್ಲಿ, ಗುರುವು ನಿಮ್ಮ ಬೆಂಬಲಕ್ಕೆ ಬರುತ್ತಾನೆ. ಆಗ ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಬಹುದು. ಶೃಂಗೇರಿ ಶಾರದೆಯನ್ನು ದರ್ಶಿಸಿ, ಗುರುದ್ವಯರ ಆಶೀರ್ವಾದ ಪಡೆದು ಬನ್ನಿ. ನಿತ್ಯವೂ ಸರಸ್ವತಿ ಅಷ್ಟೋತ್ತರ ಪಠಿಸಿ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಮಾಯೆ ಮತ್ತು ಮನಸ್ಸು; ಕೈವಾರ ತಾತಯ್ಯ ಹೇಳಿರುವುದೇನು?