ಪ್ರಶ್ನೆ: ನನ್ನ ಮದುವೆಯು ವಿಳಂಬವಾಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ ಗುರೂಜಿ.
ರಾಶಿ: ವೃಷಭ ನಕ್ಷತ್ರ: ರೋಹಿಣಿ
ಪರಿಹಾರ: ರೋಹಿಣಿ ನಕ್ಷತ್ರ ವೃಷಭ ರಾಶಿಯವರಿಗೆ ಗುರುವು ಏಕಾದಷದಲ್ಲಿ ಇದ್ದು, ನಿಮ್ಮ ಪ್ರಯತ್ನವನ್ನು ಮುಂದುವರಿಸಿದಲ್ಲಿ ವಿವಾಹವು ನಿಶ್ಚಯವಾಗುವುದು. ವಿವಾಹವೂ ವಿಳಂಬ ಆಯಿತು ಎಂಬ ಚಿಂತೆ ಬೇಡ. ನೀವು ಇರುವ ಸ್ಥಳದಲ್ಲಿ ನಿಮ್ಮ ಕುಲಗುರುಗಳ ಬಳಿ ಒಮ್ಮೆ ನಿಮ್ಮ ಜಾತಕವನ್ನು ಪರಿಪೂರ್ಣವಾಗಿ ವಿಶ್ಲೇಷಣೆ ಮಾಡಿಸಿ ಸಲಹೆ ಪಡೆಯಿರಿ. ನಿಮ್ಮ ಕುಲದೇವರ ದರ್ಶನ ಮಾಡಿ ಬನ್ನಿ. ವಲ್ಲಿ ದೇವಾಸೇನ ಸಹಿತ ಸುಬ್ರಹ್ಮಣ್ಯ ಕಲ್ಯಾಣೋತ್ಸವ ಮಾಡಿಸುತ್ತೇವೆ ಎಂಬ ಹರಕೆ ಇರಿಸಿ. ನಿಮ್ಮ ಮನಸಿಗೆ ಒಪ್ಪುವಂತಹ ವಧುವೇ ನಿಮಗೆ ಸಂಗಾತಿಯಾಗಿ ಬರುತ್ತಾರೆ. ಶುಭವಾಗುವುದು.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?