ಪ್ರಶ್ನೆ: ಸರ್ಕಾರಿ ಉದ್ಯೋಗ ಪಡೆಯಬೇಕೆಂದು ಬಹಳಷ್ಟು ಶ್ರಮಿಸುತ್ತಿದ್ದೇನೆ. ನನಗೆ ಸರ್ಕಾರಿ ಉದ್ಯೋಗ ಸಿಗುವುದೇ ಗುರೂಜಿ?
ರಾಶಿ: ಮೇಷ ನಕ್ಷತ್ರ: ಅಶ್ವಿನಿ
ಪರಿಹಾರ: ನಿಮ್ಮ ರಾಶಿಗೆ ಏಕಾದಶದಲ್ಲಿ ಶನಿ ಇರುವುದರಿಂದ ಸರ್ಕಾರಿ ಸೇವಕ ವೃತ್ತಿ ತುಂಬಾ ಪ್ರಯತ್ನ ಮಾಡಿದಲ್ಲಿ ಸಿಗುವ ಲಕ್ಷಣಗಳಿವೆ. ಅದಕ್ಕೆ ತಕ್ಕಂತೆ ತಯಾರಿ ನಡೆಸಿ, ಪರೀಕ್ಷೆಯನ್ನು ಎದುರಿಸಲು ಸೂಕ್ತ ಮಾರ್ಗದರ್ಶನವನ್ನು ಪಡೆಯಿರಿ. ಶ್ರದ್ಧೆಯಿಂದ ಅಭ್ಯಾಸ ಮಾಡಿದಲ್ಲಿ ನಿಮ್ಮ ಆಸೆ ಈಡೇರುವುದು. ದೇವರನ್ನು ನಂಬಿ ಯಾರೂ ಕೆಟ್ಟವರಿಲ್ಲ. ಮನುಷ್ಯನ ಬೇಡಿಕೆ ಈಡೇರಿಸಲು ದೈವ ಸಹಾಯ ಅತ್ಯಗತ್ಯ. ದೈವ ಸಹಾಯಕ್ಕೆ ಮೊರೆ ಹೋದರೆ ದೇವರು ಸಂರಕ್ಷಿಸುತ್ತಾನೆ.
ನಿಮ್ಮ ಜಾತಕದ ಪ್ರಕಾರ ಗುರುವು ಸಪ್ತಮದಲ್ಲಿರುವುದರಿಂದ ಒಳ್ಳೆಯ ಉದ್ಯೋಗ ಪಡೆಯಲಿದ್ದೀರಿ. ಗುರುವಿನ ಪೂಜೆ ಪ್ರಾರ್ಥನೆ ಮಾಡಿ. ಕುಂಭಾಶಿ ಆನೆಗುಡ್ಡೆಯ ಗಣಪತಿಯ ದರ್ಶನ ಪಡೆದು ಬನ್ನಿ. ದಿನವೂ ಗಣಪತಿಗೆ 21 ಗರಿಕೆ ಇಟ್ಟು ಪೂಜೆ ಮಾಡಿ. ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?