ಪ್ರಶ್ನೆ: ಐದು ವರ್ಷದಿಂದ ಪ್ರಯತ್ನಪಡುತ್ತಿದ್ದೇನೆ, ನನಗೆ ಸರ್ಕಾರಿ ಉದ್ಯೋಗ ದೊರೆಯುವುದೇ ಗುರೂಜಿ?
ರಾಶಿ: ಮೇಷ ನಕ್ಷತ್ರ: ಭರಣಿ
ಪರಿಹಾರ: ಪರಿಪೂರ್ಣವಾದ ಜಾತಕ ಇಲ್ಲದಿದ್ದರೆ ಸಲಹೆ ನೀಡುವುದು ಅತ್ಯಂತ ಕಷ್ಟಕರ ಕೆಲಸ. ಆದರೆ ಯಾರನ್ನೂ ನಿರಾಶೆ ಮಾಡದಿರಲು ಪರಿಹಾರ ಹೇಳುವಂತೆ ಆರಾಧ್ಯ ದೇವರು ಪ್ರೇರೇಪಿಸಿದ್ದರಿಂದ ಇಲ್ಲಿ ನಿಮ್ಮ ಪ್ರಶ್ನೆಗೆ ಪರಿಹಾರ ತಿಳಿಸಲಾಗಿದೆ. ನೀವು ಯಾರಿಗಾದರೂ ವಿಳಾಸ ಬರೆಯದೇ ಪತ್ರ ಬರೆದರೆ ಅದು ತಲುಪುವುದೇ? ಹಾಗೆಯೇ ಸರಿಯಾದ ಮಾಹಿತಿ ನೀಡದೆ ಸಮಸ್ಯೆ ಹೇಳಿಕೊಂಡರೆ ಪರಿಹಾರ ಸೂಚಿಸುವುದು ಹೇಗೆ?
ಉದ್ಯೋಗ ಪ್ರತಿಯೊಬ್ಬರಿಗೂ ಮಹತ್ವದ ವಿಷಯ. ದುಡಿಮೆ ಇಲ್ಲದೆ ಯಾರ ಜೀವನವೂ ನಡೆಯದು. ದುಡಿದು ಕುಟುಂಬವನ್ನು ಸಲಹುವುದು ಧರ್ಮ. ಉದ್ಯೋಗದ ಕುರಿತು ನೀವು ಪ್ರಶ್ನೆ ಮಾಡಬೇಕಾಗಿಯೇ ಇಲ್ಲ. ದೇವರು ನಿಮಗೆ ಕೊಟ್ಟ ಉದ್ಯೋಗವನ್ನು ಮಾಡಿ, ಅವನಲ್ಲಿ ಶರಣು ಹೋದರೆ ದೇವರೇ ದಾರಿತೋರಿಸುತ್ತಾನೆ.
ಗಣಪತಿಯನ್ನು ಪೂಜಿಸಿ, ಏಕಾದಶದಲ್ಲಿ ಶನಿ ಇರುವುದರಿಂಧ ಉದ್ಯೋಗ ಲಾಭವು ದೊರಕುತ್ತದೆ. ಸರ್ಕಾರಿ ಉದ್ಯೋಗವೇ ಬೇಕೆಂಬ ಹಂಬಲ ಬೇಡ. ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಸರ್ಕಾರದಿಂದ ಸಾಧ್ಯವೇ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕೀರ್ತಿವಂತರಾಗಿ ಬದುಕಿ. ಇತರರಿಗೆ ಮಾದರಿಯಾಗಿ. ನಿಮಗೆ ಒಳ್ಳೆಯದಾಗುತ್ತದೆ ಹೆದರಬೇಡಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: ಗೋ ಸಂಪತ್ತು : ದೇಶಿ ಗೋವಿನ ಸಗಣಿಯ ಮಹತ್ವ ನಿಮಗೆಷ್ಟು ಗೊತ್ತು?