Site icon Vistara News

Astrology Answers : ಕೆಸಲದಲ್ಲಿ ನೆಮ್ಮದಿಯೂ ಇಲ್ಲ, ಮನ್ನಣೆಯೂ ಸಿಗುತ್ತಿಲ್ಲ, ಕೆಲಸವನ್ನು ಬದಲಾಯಿಸಬಹುದೇ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಈಗ ಮಾಡುತ್ತಿರುವ ಕೆಸಲದಲ್ಲಿ ನೆಮ್ಮದಿಯೂ ಇಲ್ಲ, ಮನ್ನಣೆಯೂ ಸಿಗುತ್ತಿಲ್ಲ. ಕೆಲಸವನ್ನು ಬದಲಾಯಿಸಬಹುದೇ ಗುರೂಜಿ?
ರಾಶಿ: ಮಿಥುನ ನಕ್ಷತ್ರ: ಆರಿದ್ರಾ

ಪರಿಹಾರ: ದಶಮದಲ್ಲಿ ಗುರು ಸಂಚಾರವಿದ್ದು, ದೈವಬಲ-ಮನೋಬಲ ಎರಡೂ ಕಡಿಮೆಯಾಗಿದೆ. ಕೆಲಸವನ್ನು ಬದಲಾಯಿಸುವ ಯೋಚನೆ ಪದೇ ಪದೇ ನಿಮ್ಮನ್ನು ಕಾಡುತ್ತಿದೆ ಎಂದರೆ ನಿಮಗೆ ಆತ್ಮವಿಶ್ವಾಸವು ಕಡಿಮೆಯಾಗಿದ್ದು, ಕೆಲಸದಲ್ಲಿ ನಿರಾಸಕ್ತಿ ಇದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ನೀವು ಇರುವ ಕೆಲಸವನ್ನು ಛಲದಿಂದ, ಧೈರ್ಯದಿಂದ ಮಾಡಬೇಕು. ಎದುರಾಗುವ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಮಾಡುತ್ತಿರುವ ಕೆಲಸದಲ್ಲಿಯೇ ಇನ್ನಷ್ಟು ಅನುಭವ ಪಡೆಯಬೇಕು. ಇದರಿಂದ ನೀವು ಕೆಲಸದಲ್ಲಿ ನೈಪುಣ್ಯತೆಯನ್ನು, ಹೆಸರನ್ನು ಪಡೆಯಲು ಸಾಧ್ಯ. ದುರ್ಗೆಯನ್ನು ಆರಾಧಿಸಿ, ದುರ್ಗಾ ಸಹಸ್ರನಾಮವನ್ನು ಪಾರಾಯಣ ಮಾಡಿರಿ. ಏಪ್ರಿಲ್‌ನಲ್ಲಿ ಗುರು ಏಕದಶಕ್ಕೆ ಬಂದಾಗ ಒಳ್ಳೆಯ ಪ್ರಗತಿಯನ್ನು ಕಾಣುತ್ತೀರಿ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version