ಪ್ರಶ್ನೆ : ನಾನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತಿಲ್ಲ. ಸೋಲಿನ ಮೇಲೆ ಸೋಲಾಗುತ್ತಿದೆ. ಏನು ಮಾಡುವುದು? ಪರಿಹಾರ ತಿಳಿಸಿ.
ರಾಶಿ: ಮೀನ ನಕ್ಷತ್ರ: ರೇವತಿ
ಪರಿಹಾರ: ಲಗ್ನಸ್ಥಿತ ಗುರುವು, ದ್ವಾದಶಸ್ಥಿತೇ ಶನಿ ಇವರು ಅವರವರ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ. ಯಾವುದೋ ಕಾರಣಕ್ಕೆ ನಿಮಗೂ ನಿಮ್ಮ ವಿಷಯಗಳಿಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುತ್ತಾರೆ. ಹೀಗಾಗಿಯೇ ನೀವು ಸೋಲಿನ ರುಚಿ ಕಾಣಬೇಕಾಗಿದೆ. ದ್ವಾದಶ ಶನಿಗೆ ಪ್ರಾರ್ಥನೆ ಮಾಡಬೇಕು. ಜತೆಗೆ ಗುರು ಕಟಾಕ್ಷವೂ ಇರಬೇಕು. ʻಏನಿದ್ದರೆ ಏನಯ್ಯ ದೈವಕ್ಕಿಂತ ಮಿಗಿಲಾದ್ದಿಲ್ಲಯ್ಯʼ ಎಂದು ಬಸವಣ್ಣ ಹೇಳಿರುವಂತೆ ದೈವವನ್ನು ನಂಬಿ, ಆತನೇ ನಿಮಗೆ ಈಗ ದಾರಿ ತೋರಿಸಬೇಕು. ಇಷ್ಟ ದೇವರನ್ನು ನಂಬಿ, ಕಷ್ಟ ಕಾಲದಲ್ಲಿ ಮುನ್ನೆಡೆಸು ದೇವಾ ಎಂದು ಪ್ರಾರ್ಥಿಸಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?