ಪ್ರಶ್ನೆ : ಜೀವನದಲ್ಲಿ ಬಹಳ ಕಷ್ಟ ಎದುರಿಸುತ್ತಿದ್ದೇನೆ. ಯಾವುದೇ ಕೆಲಸ ಸುಸೂತ್ರವಾಗಿ ಸಾಗುತ್ತಿಲ್ಲ. ಸಂಸಾರದಲ್ಲಿಯೂ ವಿಪರೀತ ಸಮಸ್ಯೆಗಳಾಗಿವೆ. ದಯವಿಟ್ಟು ಪರಿಹಾರ ತಿಳಿಸಿ ಗುರೂಜಿ.
ರಾಶಿ: ಮಕರ ನಕ್ಷತ್ರ: ಧನಿಷ್ಟ
ಪರಿಹಾರ: ನಿಮ್ಮದು ಮಕರ ರಾಶಿ. ಈಗ ಸಮಯ ಅಷ್ಟೊಂದು ನಿಮ್ಮ ಪರವಾಗಿಲ್ಲ. ಹೀಗಾಗಿ ಎಲ್ಲ ಕೆಲಸ ಕಾರ್ಯಗಳೂ ದೈವ ಬಲದಲ್ಲಿಯೇ ಸಾಗಬೇಕು. ನಿಮಗೆ ಸಂಸಾರ ನೌಕೆ ದಾಟಲು ಶನೈಶ್ವರನ ಕೃಪಾಕಟಾಕ್ಷವು ಬೇಕೇ ಬೇಕು. ಇದಕ್ಕಾಗಿ ಎದ್ದಕೂಡಲೇ ನಿತ್ಯವೂ 21 ಬಾರಿ ಮುಂದೆ ನೀಡಿರುವ ಮಂತ್ರವನ್ನು ಪಠಿಸಿ. ಆಗ ನಿಮ್ಮ ದುಃಖ ದೂರವಾಗಿ ಸ್ಥಿರವಾದ ಬುದ್ಧಿಯನ್ನು ದೇವರೇ ಕರುಣಿಸುತ್ತಾನೆ. ಜತೆಗೆ ಚಿಂತಿತ ಕಾರ್ಯವು ಫಲಿಸುತ್ತದೆ.
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾಮರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||
ಈ ಮಂತ್ರವನ್ನು ಜಪಿಸುವುದರ ಜತೆಗೆ ನಿಮ್ಮ ಮಾತಾ-ಪಿತರಿಗೆ ತಲೆಬಾಗಿ ಆರ್ಶೀವಾದ ಪಡೆಯಿರಿ. ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಾಣುವಿರಿ. ಧೈರ್ಯಗೆಡಬೇಡಿ, ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?