Site icon Vistara News

Astrology Answers : ಮದುವೆ ಮುರಿದು ಬಿದ್ದಿದೆ, ಮರು ಮದುವೆ ಸಾಧ್ಯವೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ : ಮದುವೆ ಮುರಿದು ಬಿದ್ದಿದೆ. ಹೀಗಾಗಿ ಮಾನಸಿಕ ನೆಮ್ಮದಿ ಇಲ್ಲ. ಮರು ಮದುವೆ ಸಾಧ್ಯವೇ?
ರಾಶಿ: ಧನಸ್ಸು ನಕ್ಷತ್ರ: ಮೂಲ

ಪರಿಹಾರ: ನೀವು ಕೊಟ್ಟಿರುವ ವಿವರಗಳು ನಿಮ್ಮ ಮದುವೆ ಮುರಿದು ಬೀಳಲು ಸರಿಯಾದ ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಲದು. ನಿಮ್ಮ ವೈವಾಹಿಕ ಸ್ಥಿತಿಯನ್ನು ತಿಳಿಯುವುದು ಕಷ್ಟವಾಗುತ್ತಿದೆ. ಆದರೂ ಮದುವೆ ಮುರಿದು ಬಿದ್ದಿರುವ ಬೇಸರದಲ್ಲಿ ನೀವಿದ್ದೀರಿ ಎಂದುಕೊಂಡು ಇಲ್ಲಿ ಉತ್ತರ ನೀಡುತ್ತಿದ್ದೇವೆ. ನಿಮ್ಮ ಜೀವನದಲ್ಲಿ ಹೀಗೆಲ್ಲಾ ಗಿರುವುದು ದುಃಖಕರ ಪ್ರಸಂಗ. ದೈವವನ್ನು ನಂಬಿದವರು ಮೃತ್ಯುವಿಗೂ ಹೆದರುವುದಿಲ್ಲ. ನೀವು ಮದುವೆಯ ವಿಷಯಕ್ಕೆ ಏಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತೀರಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಸಾಧ್ಯವಾದಲ್ಲಿ ತಮಿಳುನಾಡಿನ ತಿರುಚ್ಚಂದೂರ್‌ ಸಂದರ್ಶಿಸಿ ಬನ್ನಿ. ಸುಬ್ರಹ್ಮಣ್ಯ ಆಲಯದಲ್ಲಿ ಕಲ್ಯಾಣೋತ್ಸವ ಮಾಡಿಸುವೆವು ಎಂದು ಪ್ರಾರ್ಥನೆ ಮಾಡಿ. ನಿಮಗೆ ಉತ್ತಮ ಸಂಬಂಧ ಕೂಡಿ ಬಂದು, ಮತ್ತೆ ಮದುವೆ ನೆರವೇರುತ್ತದೆ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version