Site icon Vistara News

Astrology Answers : ನನಗೆ ಒಳ್ಳೆಯ ಕೆಲಸ ಯಾವಾಗ ದೊರೆಯಬಹುದು ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ : ನನಗೆ ಕೆಲಸ ಹುಡುಕೀ ಹುಡುಕಿ ಸಾಕಾಗಿ ಹೋಗಿದೆ ಗುರೂಜಿ. ನನಗೆ ಒಳ್ಳೆಯ ಕೆಲಸ ಯಾವಾಗ ದೊರೆಯಬಹುದು?
ರಾಶಿ: ಮಕರ ನಕ್ಷತ್ರ: ಧನಿಷ್ಠ

ಪರಿಹಾರ: ಮಕರ ರಾಶಿಯವರಿಗೆ ಈಗ ಶನಿಯು ದ್ವಿತೀಯಕ್ಕೆ ಬಂದಿದ್ದು, ಸಾಡೇಸಾತಿಯ ಕಡೆಯ ಭಾಗದಲ್ಲಿ ಇದ್ದೀರಿ. ಹೀಗಾಗಿಯೇ ನಿಮ್ಮ ಮನಸ್ಸಿನಲ್ಲಿ ಗೊಂದಲ, ಹಾಗೆಯೇ ಮಾಡುವ ಕಾರ್ಯಗಳಲ್ಲಿ ವಿಘ್ನ ಎದುರಾಗುತ್ತದೆ. ಆದರೆ ಗುರು ತೃತೀಯದಲ್ಲಿ ಇರುವುದರಿಂದ ನೀವಂದುಕೊಂಡಂತೆ ನಿಮಗೆ ಕೆಲಸವೇ ಸಿಗುವುದಿಲ್ಲ ಎಂದೇನೂ ಇಲ್ಲ. ನಿಮ್ಮ ಜಾಣ್ಮೆಯಿಂದಲೇ ಸಿಕ್ಕ ಕೆಲಸಕ್ಕೆ ಸೇರಿ. ಅಲ್ಲಿಯೇ ಪರಿಶ್ರಮ ಪಟ್ಟು ಕೆಲಸ ಮಾಡಿದಲ್ಲಿ ಗುರುವು ರಕ್ಷಣೆ ನೀಡಿ ಕಾಪಾಡುತ್ತಾನೆ. ದಕ್ಷಿಣಾಮೂರ್ತಿ ಅಷ್ಟೋತ್ತರ ಪಠಿಸಿ. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ದೇವರನ್ನೂ ದರ್ಶಿಸಿ. ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version