Site icon Vistara News

Astrology Answers | ನನ್ನ ಹೆಂಡತಿ ಬಿಕಾಂ ಮುಗಿಸಿದ್ದಾಳೆ, ಸರ್ಕಾರಿ ಕೆಲಸ ಸಿಗುತ್ತದೆಯೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಹೆಂಡತಿ ಬಿಕಾಂ ಮುಗಿಸಿದ್ದಾಳೆ. ಸರ್ಕಾರಿ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಅವಳಿಗೆ ಸರ್ಕಾರಿ ಕೆಲಸ ಸಿಗುತ್ತದೆಯೇ?.
ಜನ್ಮದಿನಾಂಕ : 17-2-1994 ನಕ್ಷತ್ರ: ಭರಣಿ

ಪರಿಹಾರ: ಪ್ರತಿಯೊಬ್ಬರೂ ಉದ್ಯೋಗ ಪಡೆಯಬೇಕೆಂದು ಅಪೇಕ್ಷೆ ಪಡಬೇಕೇ ಹೊರತು ಇದೇ ಕೆಲಸ ಆಗಬೇಕು, ಸರ್ಕಾರಿ ಕೆಲಸವೇ ಬೇಕು, ಒಳ್ಳೆಯ ಕಂಪನಿ ಕೆಲಸವೇ ಆಗಬೇಕು ಎಂದು ನಿರೀಕ್ಷೆಗಳನ್ನಿಟ್ಟು ಕೊಳ್ಳಬಾರದು. “ಉದ್ಯೋಗಂ ಮಾನವ ಲಕ್ಷಣಂʼʼ ಮನುಕುಲದಲ್ಲಿ ಹುಟ್ಟಿದ ಮೇಲೆ ಯಾವುದಾದರೂ ಒಂದು ಉದ್ಯೋಗ ಮಾಡಬೇಕು. ಮನೆ ಕೆಲಸದಿಂದ ಹಿಡಿದು, ಯಾವ ಕೆಲಸ ಮಾಡಿದರೂ ತಪ್ಪಿಲ್ಲ. ಆದ್ದರಿಂದ ಸರ್ಕಾರಿ ಕೆಲಸವೇ ಆಗಬೇಕೆಂದು ಆಸೆ ಪಡಬಾರದು. ಉದ್ಯೋಗ ಭದ್ರತೆಯನ್ನು ಒದಗಿಸುವ ಯಾವ ಕೆಲಸವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ನನ್ನ ಪತ್ನಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆಯೇ ಎಂಬುದಕ್ಕಿಂತ ತತ್ಸಮಾನವಾಗಿ ಉದ್ಯೋಗ ಮಾಡುತ್ತಾಳೆಯೇ ಎಂದು ಕೇಳುವುದು ಇಲ್ಲಿ ಸೂಕ್ತ. ಭರಣಿ ನಕ್ಷತ್ರದವರಿಗೆ ಸದ್ಯವೇ ಹನ್ನೊಂದನೇ ಮನೆಗೆ ಶನಿಯು ಬರುತ್ತಿದ್ದಾನೆ. ಹೀಗಾಗಿ ಹೆಚ್ಚು ಪ್ರಯತ್ನ ಪಡಲಿ, ಶನಿಸ್ತ್ರೋತ್ರವನ್ನು ಚೆನ್ನಾಗಿ ಪಾರಾಯಣ ಮಾಡಲಿ, ಶನಿ ಅಷ್ಟೋತ್ತರದಿಂದ ಪೂಜೆ ಮಾಡಲು ಹೇಳಿ. ಈಶ್ವರನನ್ನು ಮತ್ತು ಕಟೀಲು ದುರ್ಗಾಪರಮೇಶ್ವರಿಯನ್ನು ದರ್ಶಿಸಿ ಬರಲಿ. ಭರಣಿ ನಕ್ಷತ್ರದ ಅವರಿಗೆ ಕುಜ-ಶನಿ ಭುಕ್ತಿ ನಡೆಯುತ್ತಿದೆ. ಹೀಗಾಗಿ ಸುಬ್ರಹ್ಮಣ್ಯ ಮತ್ತು ದುರ್ಗಾಪರಮೇಶ್ವರಿಯನ್ನು ಏಕಕಾಲಕ್ಕೆ ಪೂಜಿಸಲಯ ಹೇಳಿ, ಅವರ ಇಷ್ಟಾರ್ಥಗಳು ಈಡೇರುತ್ತವೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

Exit mobile version