ಪ್ರಶ್ನೆ: ನನಗೆ ಮದುವೆ ಆಗಿ ಐದು ವರ್ಷಗಳಾಗಿವೆ. ಅದರೆ ಇನ್ನೂ ಮಕ್ಕಳಾಗಿಲ್ಲ. ನನಗೆ ಮಕ್ಕಳಾಗುತ್ತವೆಯೇ ದಯವಿಟ್ಟು ತಿಳಿಸಿ.
ರಾಶಿ: ಸಿಂಹ ನಕ್ಷತ್ರ: ಮಖ
ಪರಿಹಾರ: ಮಖ ನಕ್ಷತ್ರದಲ್ಲಿ ಜನಿಸಿದ ನೀವು ಕಷ್ಟ ಪಟ್ಟು, ದೈವವನ್ನು ಭಕ್ತಿಯಿಂದ ಎದೆಯಲ್ಲಿ ತುಂಬಿಕೊಂಡು, ಭಗವಂತನನ್ನು ಒಲಿಸಿಕೊಂಡರೆ ಯಾವ ಕಷ್ಟ ನಷ್ಟವೂ ಬರುವುದಿಲ್ಲ. ಸದ್ಯ ಅಷ್ಟಮ ಗುರು ಇರುವುದರಿಂದ ತಾತ್ಕಾಲಿಕ ತಡೆ ಆಗಿದೆ. ಶನಿಯ ಸ್ತೋತ್ರ ಪಾರಾಯಣ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಏಳನೇ ಮನೆಗೆ ಗುರು ಬಂದಾಗ ಪತಿ-ಪತ್ನಿ ಇಬ್ಬರೂ ಕುಕ್ಕೆ ಸುಬ್ರಹ್ಮಣ್ಯನನ್ನೂ, ಗಾಣಗಾಪುರದ ದತ್ತಾತ್ರೇಯನನ್ನೂ ದರ್ಶಿಸಿ ಬನ್ನಿ. ಸೂಕ್ತ ವೈದ್ಯರ ಸಲಹೆ ಪಡೆದರೆ ಸಬ್ರಮಣ್ಯನೇ ನಿಮಗೆ ಹರಸಿ, ದತ್ತನೇ ನಿಮ್ಮ ಮನೆಯಲ್ಲಿ ಜನಿಸುತ್ತಾನೆ.
ಮಖ ನಕ್ಷತ್ರವೂ ಪಿತೃಗಳ ನಕ್ಷತ್ರ. ಅಧಿಪತಿ ಕೇತು. ಮನೆಯಲ್ಲಿ ಕಾಲವಾದ ಹಿರಿಯರಿಗಾಗಿ ಏನು ಮಾಡಿದ್ದಾರೆ ಎಂದು ತಿಳಿದು, ಕುಲ ಪುರೋಹಿತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ಪಿತೃಗಳ ಕಾರ್ಯ ನಿಮ್ಮ ಮನೆಯಲ್ಲಿ ಸರಿಯಾಗಿ ನಡೆದಿದೆಯೇ ಎಂದು ವಿಚಾರ ಮಾಡಿಕೊಂಡು, ಏನಾದರೂ ತೊಂದರೆಗಳಿದ್ದರೆ ಸೂಕ್ತ ಪರಿಹಾರ ಮಾಡಿಕೊಳ್ಳಿ. ಒಳ್ಳೆಯದಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, ಇ-ಮೇಲ್ ವಿಳಾಸ: janasamparka@abhilashbc
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?