Site icon Vistara News

Astrology Answers : ನನ್ನ ಮಗನ ವಿದ್ಯಾಭ್ಯಾಸ ಹೇಗಿದೆ? ಹಣದ ಸಮಸ್ಯೆ ಬಗೆ ಹರಿಯುವುದೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಮಗನ ವಿದ್ಯಾಭ್ಯಾಸ ಹೇಗಿದೆ? ಹಣದ ಸಮಸ್ಯೆ ಬಗೆ ಹರಿಯುವುದೇ?
ರಾಶಿ: ಮೇಷ ನಕ್ಷತ್ರ: ಭರಣಿ

ಪರಿಹಾರ: ಭರಣಿ ನಕ್ಷತ್ರ ಮೇಷರಾಶಿಯವರಿಗೆ ಗುರುವೂ ಸ್ವಕ್ಷೇತ್ರದಲ್ಲಿ ಸ್ಥಿತನಾಗಿದ್ದು, ದ್ವಾದಶದಲ್ಲಿ ಇದ್ದಾನೆ. ಆದರೆ ಶನಿಯು ಏಕಾದಶದಲ್ಲಿ ಇದ್ದು, ವಿದ್ಯಾಭ್ಯಾಸಕ್ಕೆ ಯಾವ ಅಡಚಣೆಯೂ ಇಲ್ಲದ ಹಾಗೆ ನೋಡಿಕೊಳ್ಳುತ್ತಾನೆ. ಹಣದ ಕೊರತೆಯನ್ನು ನೀಗಿ ನಿಮ್ಮ ಮಗನಿಗೆ ರಕ್ಷಣೆ ನೀಡಿ ಆತ ಬಯಸಿದ ಕೆಲಸಗಳಲ್ಲಿ ಯಶಸ್ಸು ತಂದು ಕೊಡುತ್ತಾನೆ. ನಿತ್ಯ ಗಣಪತಿಗೆ 21ಗರಿಕೆ ಇರಿಸಿ, ಪೂಜೆ ಮಾಡಲು ಹೇಳಿ. ಶುಕ್ರವಾರದಂದು ಲಕ್ಷ್ಮೀಯನ್ನು ಅಷ್ಟೋತ್ತರದಿಂದ ಪೂಜಿಸಲಿ. ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!

Exit mobile version