ಪ್ರಶ್ನೆ: ನನ್ನ ಮುಂದಿನ ಜೀವನ ಹೇಗಿರುತ್ತದೆ ತಿಳಿಸಿ ಗುರೂಜಿ?
ಜನ್ಮದಿನಾಂಕ : 19-04-1970 ನಕ್ಷತ್ರ: ಉತ್ತರಾ
ಪರಿಹಾರ: ಜನವರಿ 17ರವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಿ. ಆ ನಂತರ ಪಂಚಮ ಶನಿ ಬಿಟ್ಟ ಕೂಡಲೇ ನಿಮಗೆ ದಾರಿ ಕಾಣಿಸುತ್ತದೆ. ನಿಮ್ಮ ಜೀವನ ಸುಗಮವಾಗುತ್ತದೆ. ಏಪ್ರಿಲ್‌ನಲ್ಲಿ ಅಷ್ಟಮಕ್ಕೆ ಹೋಗುತ್ತಾನೆ. ಆಗ ನೀವು ಸಸಾರ ತೆಗೆದುಕೊಳ್ಳಬಾರದು. ಅಚಲವಾದ ಗುರು ಭಕ್ತಿ, ದೃಢವಾದ ವಿಶ್ವಾಸವಿರಬೇಕು. ಆಗಲೇ ನೀವು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಇನ್ನು ಮುಂದೆ ನಿಮಗೆ ಒಳ್ಳೆಯದಾಗುತ್ತದೆ. ಕೈ ಹಿಡಿದ ಕೆಲಸ ಯಶಸ್ವಿಯಾಗುತ್ತದೆ. ಗುರು ದಶಾ ರಾಹು ಭುಕ್ತಿ ಇರುವುದರಿಂದ ನೀವು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ, ಕುಕ್ಕೆ ಸುಬ್ರಹ್ಮಣ್ಯನನ್ನು ದರ್ಶಿಸಿ ಬನ್ನಿ. ನಿತ್ಯ ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಪಾರಾಯಣ ಮಾಡಿದರೆ ಒಳ್ಳೆಯದನ್ನು ಕಾಣಬಹುದು. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಇದನ್ನೂ ಓದಿ | ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?