ಪ್ರಶ್ನೆ: ವ್ಯವಹಾರದಲ್ಲಿ ಬಹಳ ನಷ್ಟ ಅನುಭವಿಸುತ್ತಿದ್ದೇನೆ. ದಯವಿಟ್ಟು ದಾರಿ ತೋರಿಸಿ ಗುರೂಜಿ.
ರಾಶಿ: ಸಿಂಹ ನಕ್ಷತ್ರ: ಉತ್ತರಾ
ಪರಿಹಾರ: ನಿಮಗೆ ಅಷ್ಟಮದಲ್ಲಿ ಗುರು ಸಪ್ತಮದಲ್ಲಿ ಶನಿಯಿದ್ದು, ಸಮಯವು ಅಷ್ಟೇನೂ ಅನುಕೂಲಕರವಾಗಿಲ್ಲದಿದ್ದರೂ ಇದೇ ಏಪ್ರಿಲ್ 21ರ ನಂತರ ಗುರುವು ನವಮಕ್ಕೆ ಬರುವುದರಿಂದ ನಿಮ್ಮ ವ್ಯವಹಾರದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕೆ ಸತತವಾದ ದೈವ ಚಿಂತನೆ ಅತ್ಯಗತ್ಯ. ಯಾರೊಂದಿಗೂ ಚರ್ಚೆಗೆ ಹೋಗದೆ ನಿಮ್ಮ ವ್ಯವಹಾರಗಳನ್ನು ನಡೆಸಿಕೊಂಡು ಹೋದರೆ, ಹಣಕಾಸಿನ ಮುಗ್ಗಟ್ಟಿನಿಂದ ಹೊರ ಬರುತ್ತೀರಿ. ಇಡಗುಂಜಿ ರಾಜಗಣಪತಿಯನ್ನು ದರ್ಶಿಸಿ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, ಇ-ಮೇಲ್ ವಿಳಾಸ: janasamparka@abhilashbc
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!