ಪ್ರಶ್ನೆ: ನಾನು ಸರ್ಕಾರಿ ನೌಕರಿ ಪಡೆಯಬೇಕೆಂದು ಪ್ರಯತ್ನ ಪಡುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದು, ಯಶಸ್ಸು ಸಿಗುತ್ತಿಲ್ಲ. ನನಗೆ ಸರ್ಕಾರಿ ನೌಕರಿ ಪಡೆಯಲು ಸಾಧ್ಯವೇ ಗುರೂಜಿ?
ರಾಶಿ: ಮಿಥುನ ನಕ್ಷತ್ರ: ಪುನರ್ವಸು
ಪರಿಹಾರ: ನೀವು ಕೊಟ್ಟಿರುವ ವಿವರಗಳು ಪೂರ್ಣವಾಗಿಲ್ಲವಾದರೂ ನಿಮ್ಮ ಈಗಿನ ಗ್ರಹಸ್ಥಿತಿಯನ್ನು ನೋಡಿದರೆ, ಗುರು ಗ್ರಹವು ಏಕಾದಶಕ್ಕೆ ಬಂದ ಮೇಲೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರೂ ಯಶಸ್ಸು ಸಾಧಿಸುತ್ತೀರಿ. ಓದಿನಲ್ಲಿ ಏಕಾಗ್ರತೆ, ಬದ್ಧತೆ, ನಿರಂತರ ಶ್ರಮ ಇರಲಿ. ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡರೆ ಒಳ್ಳೆಯ ಅಂಕಗಳನ್ನು ಗಳಿಸಲು ಗುರುವು ನೆರವಾಗುತ್ತಾನೆ. ಶೃಂಗೇರಿಗೆ ತೆರಳಿ ಶ್ರೀ ಶಾರದಾಂಬೆಯನ್ನು ದರ್ಶಿಸಿ, ಗುರುದ್ವಯರ ಆಶೀರ್ವಾದ ಪಡೆದು ಬನ್ನಿ. ನಿತ್ಯವೂ ಸರಸ್ವತಿ ಅಷ್ಟೋತ್ತರ ಪಠಿಸಿ. ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, ಇ-ಮೇಲ್ ವಿಳಾಸ: janasamparka@abhilashbc
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!