ಪ್ರಶ್ನೆ: ನನ್ನ ಮಗಳ ಮದುವೆಗೆ ಸಾಕಷ್ಟು ಪ್ರಯತ್ನ ಪಡುತ್ತಿದ್ದೇವೆ. ಎಲ್ಲಿಯೂ ಸಂಬಂಧ ಕೂಡಿ ಬರುತ್ತಿಲ್ಲ. ಮಗಳ ಮದುವೆ ಯಾವಾಗ ನಡೆಯುತ್ತದೆ ಎಂದು ನೋಡಿ ಹೇಳಿ ಗುರೂಜಿ.
ರಾಶಿ: ಮಕರ ನಕ್ಷತ್ರ: ಶ್ರವಣ
ಪರಿಹಾರ: ನೀವು ನೀಡಿದ ನಿಮ್ಮ ಮಗಳ ಜಾತಕದ ಮಾಹಿತಿಯ ಪ್ರಕಾರ ಶನಿಯು ಕುಂಭ ರಾಶಿಯನ್ನು ಸೇರಿರುವುದರಿಂದ ಜನ್ಮ ಶನಿಯು ಎರಡನೇ ಮನೆಗೆ ತೆರಳಿದ್ದಾನೆ. ಇದರಿಂದ ನೀವು ಮಾಡುತ್ತಿರುವ ಅವಳ ಮದುವೆಯ ಪ್ರಯತ್ನಕ್ಕೆ ಇನ್ನು ಫಲ ದೊರೆಯಲಿದೆ. ಶನಿ ಸಂಚಾರದ ಕೊನೆಯ ಹಂತದಲ್ಲಿ ಶನಿಯು ನಿಮ್ಮ ಮಗಳಿಗೆ ಅನುಗ್ರಹ ನೀಡುತ್ತಾನೆ. ಅನುರೂಪನಾದ, ವಿದ್ಯಾವಂತನಾದ ವರನು ದೊರಕಿ ಮದುವೆಯೂ ಚೆನ್ನಾಗಿ ನಡೆಯುತ್ತದೆ. ನಿಮ್ಮಮಗಳಿಗೆ ನಿತ್ಯ ಶನಿ ಅಷ್ಟೋತ್ತರ ಪಠಿಸಲು ತಿಳಿಸಿ. ಪಾರ್ವತಿ ಸಹಿತ ಸಾಂಭ ಸದಾಶಿವನನ್ನು ಧ್ಯಾನಿಸಲಿ, ಪೂಜಿಸಲಿ. ನೀವೇನೂ ಆತಂಕ ಪಡುವುದು ಬೇಡ, ಆಕೆಗೆ ಶುಭವಾಗಲಿದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, ಇ-ಮೇಲ್ ವಿಳಾಸ: janasamparka@abhilashbc
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!