Site icon Vistara News

Astrology Answers : ನನ್ನ ಮಗನ ಮದುವೆ ವಿಳಂಬವಾಗುತ್ತಿದೆ ಪರಿಹಾರ ತಿಳಿಸಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಮಗನಿಗೆ ಸೂಕ್ತ ವಧುವನ್ನು ಹುಡುಕುತ್ತಿದ್ದೇವೆ. ಎಲ್ಲಿಯೂ ಸಂಬಂಧ ಕೂಡಿ ಬರುತ್ತಿಲ್ಲ. ಮದುವೆ ವಿಳಂಬವಾಗುತ್ತಿದೆ. ಪರಿಹಾರ ತಿಳಿಸಿ.
ರಾಶಿ: ಧನಸ್ಸು ನಕ್ಷತ್ರ: ಉತ್ತರಾಷಾಢ

ಪರಿಹಾರ: ನೀವು ಕಳಿಸಿದ ಮಗನ ಜಾತಕದ ಮಾಹಿತಿಯ ಪ್ರಕಾರ ಚತುರ್ಥದಲ್ಲಿ ಗುರುವಿದ್ದು , ಲಗ್ನಾತ್ ರಾಹು ಇದ್ದಾನೆ. ಇದು ಸರ್ಪ ದೋಷವನ್ನು ಹಾಗೂ ಗುರು ಶಾಪ ಇರುವುದನ್ನು ತೋರಿಸುತ್ತದೆ. ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಕುಲಗುರುಗಳ ಅನುಗ್ರಹ ಪಡೆಯುವುದು ಅಗತ್ಯ. ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ. ಶಿರಸಿ ಸಮೀಪದ ಶ್ರೀ ಸ್ವರ್ಣವಲ್ಲಿ ಮಠದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳನ್ನು ಸಂದರ್ಶಿಸಿ, ಅವರು ಮಾಡಿದ ಶ್ರೀ ಚಕ್ರ ಅರ್ಚನೆಯ ಪ್ರಸಾದವನ್ನು ಪಡೆದು ಬನ್ನಿ. ನಂತರ ನಿಮ್ಮ ಮಗನಿಗೆ ಯೋಗ್ಯ ವಧುವಿಗಾಗಿ ಹುಡುಕಿ. ರೂಪ, ಲಾವಣ್ಯ, ತಾರುಣ್ಯ ಇರುವ ವಿದ್ಯಾವಂತೆಯಾದ ಹುಡುಗಿಯು ನಿಮ್ಮ ಮಗನಿಗೆ ಸಿಗುತ್ತಾಳೆ. ಏಪ್ರಿಲ್ 21ರ ನಂತರ ಮೇಷ ರಾಶಿಗೆ ಗುರುವೂ ಬಂದು ನಿಮ್ಮ ಮಗನನ್ನು ಅನುಗ್ರಹಿಸುತ್ತಾನೆ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!

Exit mobile version