Site icon Vistara News

Astrology Answers : ನನ್ನ ಜೀವನವನ್ನು ಸರಿಮಾಡಿಕೊಂಡು ಸಾಗಲು ಸಲಹೆ ನೀಡಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಯಾವ ವ್ಯವಹಾರ ಮಾಡಿದರೂ ಲಾಸ್ ಆಗುತ್ತಿದೆ ಗುರೂಜಿ. ಮನೆಯ ವಾತಾವರಣ ಸರಿ ಇಲ್ಲ. ನಿಮ್ಮ ಅಂಕಣವನ್ನು ಪ್ರತಿ ದಿನ ನೋಡಿಕೊಂಡು, ಪರಿಹಾರವನ್ನು ಮಾಡಿಕೊಂಡು ಬರ್ತಿದ್ದೀನಿ. ನನ್ನ ಜೀವನ ಸರಿ ಮಾಡಿಕೊಂಡು ಹೋಗಲು ಸಲಹೆ ಕೊಡಿ.
ರಾಶಿ: ವೃಶ್ಚಿಕ ನಕ್ಷತ್ರ: ಜೇಷ್ಠ , ಎರಡನೇ ಪಾದ

ಪರಿಹಾರ: ಆಧ್ಯಾತ್ಮ ಜೀವನ ಇದ್ದರೆ ಮಾತ್ರವೇ ಮನುಷ್ಯನು ಯಶಸ್ಸನ್ನು ಪಡೆಯಬಹುದು. ರಾಮಾಯಣದ ಅರಣ್ಯ ಕಾಂಡ ಓದಿದರೆ ನಮಗೆ ಸರಿಯಾದ ದಾರಿ ಕಾಣಿಸುತ್ತದೆ. ಯಾರೂ ನಮಗೆ ಕೆಟ್ಟದನ್ನು, ಒಳ್ಳೆಯದನ್ನು ಮಾಡುವುದಿಲ್ಲ. ಹಿಂದಿನ ಜನ್ಮದ ಪಾಪ ಪುಣ್ಯದಿಂದ ಸುಖ ದುಃಖ ಅನುಭವಿಸಬೇಕಾಗುತ್ತದೆ. ಜ್ಯೇಷ್ಠ ನಕ್ಷತ್ರಕ್ಕೆ ಜೂನ್ 17ವರೆಗೂ ಶನಿ ಬಲವಾಗಿದ್ದು, ಗುರು ಪಂಚಮದಲ್ಲಿದ್ದಾನೆ. ಆನಂತರೂ ನಿಮ್ಮ ಜೀವನ ಸರಿ ಆಗಲಿಲ್ಲ ಎಂದಾದರೆ ಪೂರ್ವ ಜನ್ಮದ ಕರ್ಮಗಳಿಂದ ಜೀವನ ನಡೆಸಲಾಗುತ್ತಿಲ್ಲ ಎಂದೇ ಅರ್ಥ. ಸುಬ್ರಮಣ್ಯ ದೇವರನ್ನು ತ್ರಿಕಾಲ ಪೂಜಿಸಿ. ಷಷ್ಠಿ ಉಪವಾಸ ಮಾಡಿ. ನಿತ್ಯ ಶಿವ ಅಷ್ಟೋತ್ತರ ಪಾರಾಯಣ ಮಾಡಿ.

ಜೊತೆಯಲ್ಲಿ ಯಾವುದೋ ಗುರು ಶಾಪ ಕಾಡುತ್ತಿರುವುದು ನಿಮ್ಮ ಜಾತಕದಲ್ಲಿ ಕಾಣುತ್ತಿದ್ದೆ. ನಿಮ್ಮ ಕುಲ ಗುರು ಸಂಪರ್ಕಿಸಿ. ಶ್ರೀ ಗುರು ದತ್ತಾತ್ರೇಯನನ್ನು ಪೂಜಿಸಿ, ಗುರು ಚರಿತ್ರೆ ನಿತ್ಯ ಒಂದು ಅಧ್ಯಾಯ ಪಾರಾಯಣ ಮಾಡಿ. ಅನಂತವಾದ ಭಕ್ತಿ ಇರಲಿ. ದೇವರನ್ನು ನಂಬದಿದ್ದರೆ ಇನ್ಯಾರನ್ನು ನಂಬಲು ಸಾಧ್ಯ. ಕುಲ ದೇವರನ್ನು ಪೂಜಿಸಿ ಮುಂದೆ ಸಾಗಿ. ಎಲ್ಲವೂ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!

Exit mobile version