ಪ್ರಶ್ನೆ: ನನಗೆ ಎರಡನೇ ಮದುವೆ ಯೋಗ ಇದೆಯೇ? ಯಾವಾಗ ಮದುವೆಯಾಗಬಹುದು?
ರಾಶಿ: ಸಿಂಹ ನಕ್ಷತ್ರ: ಮಖಾ
ಪರಿಹಾರ: ಮಖಾ ನಕ್ಷತ್ರಕ್ಕೆ ಸಪ್ತಮದಲ್ಲಿ ಶನಿ ಇದ್ದು, ಅಷ್ಟಮದಲ್ಲಿ ಗುರುವಿದ್ದಾನೆ. ಇದುವರೆಗೆ ಗುರುಬಲವಿರಲಿಲ್ಲ. ಇಂದಿನಿಂದ ಅಂದರೆ ಏಪ್ರಿಲ್ 21ರಿಂದ ಗುರು ಬಲ ಬರುತ್ತದೆ. ಇಂತಹ ಒಳ್ಳೆಯ ನಕ್ಷತ್ರದಲ್ಲಿ ಜನಿಸಿದ ನೀವು ಎರಡನೇ ಮದುವೆಯಾಗುವ ಪ್ರಸಂಗವನ್ನು ಏಕೆ ತಂದುಕೊಂಡಿರೋ ಗೊತ್ತಾಗುತ್ತಿಲ್ಲ. ಮಖಾ ನಕ್ಷತ್ರದ ಅಧಿದೇವತೆ ಕೇತು. ಮಖಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ನಾಲಿಗೆಯನ್ನು ಹರಿತವಾಗಿ ಬಿಡದೆ, ಸಂಯಮದಿಂದ ಬಾಳಿದರೆ ಬಾಳು ಹಸನಾಗಿರುತ್ತದೆ. ಸುಬ್ರಹ್ಮಣ್ಯನನ್ನು ಆರಾಧಿಸಿ. ಸುಬ್ರಹ್ಮಣ್ಯ ಕಲ್ಯಾಣೋತ್ಸವವನ್ನು ಮಾಡಿಸುತ್ತೇನೆ ಎಂಬ ಹರಕೆ ಇರಿಸಿ. ಸ್ಕಂದ ಪುರಾಣ ಓದಲು ಅಭ್ಯಾಸ ಮಾಡಿಕೊಳ್ಳಿ. ನಂಜನಗೂಡಿನ ಶ್ರೀಕಂಟೇಶ್ವರನ ಸನ್ನಿಧಿಗೆ ಹೋಗಿ ದರ್ಶನ ಪಡೆದು ಬನ್ನಿ. ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!