Site icon Vistara News

Astrology Answers : ನನಗೆ ಕೆಲಸ ಯಾವಾಗ ಸಿಗುತ್ತದೆ? ಮದುವೆ ಯಾವಾಗ ಆಗುತ್ತದೆ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನಗೆ ಕೆಲಸವಿಲ್ಲ, ಹುಡುಕೀ ಹುಡುಕೀ ಸಾಕಾಗಿ ಹೋಗಿದೆ. ನನಗೆ ಕೆಲಸ ಯಾವಾಗ ಸಿಗುತ್ತದೆ, ಮದುವೆ ಯಾವಾಗ ಆಗಬಹುದು ತಿಳಿಸಿ ಗುರೂಜಿ.
ರಾಶಿ: ಮಿಥುನ ನಕ್ಷತ್ರ: ಆರಿದ್ರಾ

ಪರಿಹಾರ: ನೀವು ನೀಡಿದ ಜಾತಕದ ಮಾಹಿತಿ ಪ್ರಕಾರ ಗುರುವು ನಿಮ್ಮ ರಾಶಿಯಿಂದ ಈಗ ಹನ್ನೊಂದನೇ ಮನೆಗೆ ಬಂದಿರುವುದರಿಂದ ತಾವು ದೇಹಾಲಸ್ಯವನ್ನು ಬಿಟ್ಟು ಕೆಲಸವನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು. ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಶ್ರಮಪಟ್ಟರೆ ಜಯ ಸಾಧಿಸುವಿರಿ. ಒಳ್ಳೆಯ ಕೆಲಸ ಸಿಕ್ಕ ಮೇಲೆ, ಆರ್ಥಿಕವಾಗಿ ತಕ್ಕಮಟ್ಟಿಗೆ ಬಲಿಷ್ಠರೆಂದಾದಾಗ ಮದುವೆಯ ಬಗ್ಗೆ ಯೋಚಿಸಿ.‌ ನಿತ್ಯ ಕುಲದೇವರನ್ನು ಪೂಜಿಸಿ, ಪ್ರಾರ್ಥಿಸಿ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!

Exit mobile version