ಪ್ರಶ್ನೆ: ನಾನು ಈಗ ಬೇರೆಯವರ ಕೆಳಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಆದಾಯ ಆರಕ್ಕೇರುತ್ತಲೂ ಇಲ್ಲ,ಮೂರಕ್ಕೆ ಇಳಿಯುತ್ತಲೂ ಇಲ್ಲ. ನಾನು ಸ್ವಂತ ವ್ಯಾಪಾರ ಮಾಡಬಹುದೇ ಗುರೂಜಿ?
ರಾಶಿ: ಕನ್ಯಾ ನಕ್ಷತ್ರ: ಚಿತ್ತಾ
ಪರಿಹಾರ: ಚಿತ್ತಾ ನಕ್ಷತ್ರ ಕನ್ಯಾ ರಾಶಿಯವರಿಗೆ ಈಗ ಪಂಚಮ ಶನಿ ಕಳೆದು, ಶನಿಯು 6ನೇ ಮನೆಯಾದ ಸ್ವಕ್ಷೇತ್ರಕ್ಕೆ ಬಂದಿರುವ ಸಮಯ ಇದಾಗಿದೆ. ನೀವು ಉತ್ತಮ ರೀತಿಯಲ್ಲಿ ವ್ಯಾಪಾರವನ್ನು ಶ್ರದ್ಧೆಯಿಂದ ನಡೆಸಿದಲ್ಲಿ ಯಾವ ವ್ಯಾಪಾರವಾದರೂ ನಿಮ್ಮ ಕೈ ಹಿಡಿದು, ಜೀವನದಲ್ಲಿ ಸಂತೋಷ ಕೊಡುತ್ತದೆ. ಯಾವುದೇ ವ್ಯಾಪಾರ ಮಾಡುವುದಕ್ಕೂ ಅನುಭವದ ಹಿನ್ನಲೆ, ಅದರ ಒಳಗುಟ್ಟು ,ಲಾಭ-ನಷ್ಟದ ಲೆಕ್ಕಾಚಾರ ತಿಳಿದಿರಬೇಕು. ನೀವು ಯಾವ ವ್ಯಾಪಾರ ಮಾಡಬೇಕೆಂದುಕೊಂಡಿದ್ದೀರೋ ಅದರಲ್ಲಿ ನಿಮಗೆ ಜ್ಞಾನ, ತಿಳುವಳಿಕೆ ಇದ್ದರೆ ಖಂಡಿತಾ ಯಶಸ್ವಿಯಾಗುತ್ತೀರಿ. ಶುಕ್ರ ಸಪ್ತಮದಲ್ಲಿ ಇರುವುದರಿಂದ ಯಾವ ವ್ಯಾಪಾರಕ್ಕೆ ನೀವು ಕೈ ಹಾಕಿದರೂ ಯಶಸ್ಸು ನಿಮ್ಮದಾಗಲಿದೆ. ದುರ್ಗೆಯನ್ನು ಪೂಜಿಸಿ, ಪ್ರಾರ್ಥಿಸಿ. ಶುಭವಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Vastu Tips For Before Entering A New Home : ಹೊಸ ಮನೆ ಪ್ರವೇಶಿಸುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ