ಪ್ರಶ್ನೆ: ವ್ಯಾಪಾರದಲ್ಲಿ ನಷ್ಟವಾಗಿದೆ. ಬೇರೆ ವ್ಯವಹಾರಗಳೂ ಕೈಸುಟ್ಟಿವೆ. ಬಹಳ ಸಾಲ ಮಾಡಿಕೊಂಡಿದ್ದೇನೆ ಗುರೂಜಿ. ಪರಿಹಾರ ತಿಳಿಸಿ.
ರಾಶಿ: ಮಿಥುನ ನಕ್ಷತ್ರ: ಪುನರ್ವಸು
ಪರಿಹಾರ: ಪುನರ್ವಸು ನಕ್ಷತ್ರದವರಿಗೆ ಏಪ್ರಿಲ್ 21ರಿಂದ ಗುರುವು ಏಕಾದಶ ಕ್ಕೆ ಬಂದಿದ್ದಾನೆ. ನೀವು ಪ್ರಯತ್ನ ಮಾಡುವ ಕೆಲಸದಲ್ಲಿ ಶ್ರದ್ಧೆ, ಹೆಚ್ಚಿನ ಶ್ರಮವಹಿಸಿದಲ್ಲಿ ಸತ್ಫಲ ನೀಡುತ್ತಾನೆ. ನಿಮ್ಮ ಸಾಲವೂ ತೀರುತ್ತದೆ. ಕೆಲಸವು ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಕಂಡುಕೊಳ್ಳ ಬೇಕಾದರೆ ಮೊದಲು ಆ ಕ್ಷೇತ್ರದಲ್ಲಿ ನೀವು ಪರಿಣತಿ ಹೊಂದಿರಬೇಕು. ಅಗತ್ಯ ಅನುಭವ ಪಡೆದುಕೊಂಡು ನಂತರ ಮುಂದುವರೆಯಿರಿ. ಕೊಲ್ಹಾಪುರದ ಮಹಾಲಕ್ಷ್ಮೀಯ ದರ್ಶನ ಮಾಡಿ ಬನ್ನಿ. ಪ್ರತಿ ಶುಕ್ರವಾರ ಲಕ್ಷ್ಮೀಯನ್ನು ಅಷ್ಟೋತ್ತರದಿಂದ ಪೂಜಿಸಿ. ಒಳ್ಳೆಯದಾಗುತ್ತದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Vastu Tips For Before Entering A New Home : ಹೊಸ ಮನೆ ಪ್ರವೇಶಿಸುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ