Site icon Vistara News

Astrology Answers | ನನಗೆ ಸರ್ಕಾರಿ ಕೆಲಸ ತುಂಬಾ ಇಷ್ಟ, ಸಿಗಬಹುದೇ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಮಸ್ತೆ ಗುರೂಜಿ, ನಾನು ಬಿಇ ಮುಗಿಸಿದ್ದೇನೆ. ಮುಂಚೆ ಕೆಲಸ ಮಾಡುತ್ತಿದ್ದೆ. ಆದರೆ ಈಗ ಆ ಕೆಲಸ ಬಿಟ್ಟು ಬೇರೆ ಕೆಲಸ ಹುಡುಕುತ್ತಿದ್ದೇನೆ. ಹೀಗಾಗಿ ನಾನು ಖಾಸಗಿ ಕೆಲಸಕ್ಕೆ ಹೋಗುವುದಾ ಅಥವಾ ಸರ್ಕಾರಿ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುವುದಾ ಎಂಬ ಬಗ್ಗೆ ಗೊಂದಲವಿದೆ. ನನಗೆ ಸರ್ಕಾರಿ ಕೆಲಸ ಮಾಡಬೇಕು ಅಂತ ತುಂಬಾ ಇಷ್ಟ. ನನಗೆ ಸರ್ಕಾರಿ ಕೆಲಸ ಸಿಗಬಹುದೇ? ನನ್ನ ಮುಂದಿನ ಜೀವನ ಹೇಗಿದೆ ಗುರೂಜಿ?
ಜನ್ಮದಿನಾಂಕ : 27-02-1991 ನಕ್ಷತ್ರ: ಆಶ್ಲೇಷ

ಪರಿಹಾರ: ನೀವು ಶುಕ್ರ ದಶಾ ಶನಿ ಭುಕ್ತಿಯಲ್ಲಿದ್ದೀರಿ. 2024 ರವರೆಗೂ ನಿಮಗೆ ಈ ಭುಕ್ತಿ ನಡೆಯಲಿದೆ. ಇದು ಒಳ್ಳೆಯ ಫಲವನ್ನು ನೀಡುವುದಿಲ್ಲ. ನೀವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ತಪ್ಪು ಮಾಡಿದ್ದೀರಿ. ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಆಮೇಲೆ ಇರುವ ಕೆಲಸವನ್ನು ಬಿಡಬೇಕಾಗಿತ್ತು. ಆಗಿದ್ದು, ಆಗಿಹೋಯಿತು. ಇರಲಿ, ಈಗ ನೀವು ಪ್ರತಿನಿತ್ಯ ಗಣಪತಿಯನ್ನು 21 ಗರಿಕೆಗಳನ್ನಿಟ್ಟು ಪೂಜಿಸಿ, ಪ್ರಾರ್ಥಿಸಿ. ಜತೆಗೆ ಆತನ ತಾಯಿ ಪಾರ್ವತಿಯನ್ನೂ ಕೂಡ ಯಾವುದರಿಂದಲಾದರೂ ಪೂಜಿಸಿ. ನಿಮಗೆ ಮುಂದೆ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version