ಪ್ರಶ್ನೆ: ನನ್ನ ಜೀವನದಲ್ಲಿ ನಾನಂದುಕೊಂಡಿದ್ದು ಯಾವುದೂ ನಡೆಯುತ್ತಿಲ್ಲ. ಮದುವೆಗೆ ಕೂಡ ಸೂಕ್ತ ಹುಡುಗಿ ಸಿಗುತ್ತಿಲ್ಲ. ಇದರಿಂದ ಬಹಳ ಬೇಸರವಾಗಿದೆ. ದಾರಿ ತೋರಿಸಿ ಗುರೂಜಿ.
ರಾಶಿ: ತುಲಾ ನಕ್ಷತ್ರ: ನಕ್ಷತ್ರ
ಪರಿಹಾರ: ಕಳೆದ ಎರಡು ವರ್ಷಗಳಿಂದ ಪಂಚಮ ಶನಿಯ ಸಂಕೋಲೆಯಲ್ಲಿರುವ ನೀವು ಏಪ್ರಿಲ್ ತಿಂಗಳಲ್ಲಿ ಗುರು ಸಂಚಾರದಿಂದ ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣುವಿರಿ. ತುಲಾ ರಾಶಿಯಲ್ಲಿ ಜನಿಸಿದ ನಿಮಗೆ ಈಗ ಗುರುವು ಸಪ್ತಮಕ್ಕೆ ಬಂದಿದ್ದು, ನಿಮ್ಮ ಎಲ್ಲ ಪ್ರಯತ್ನವನ್ನು ಕೈಗೂಡುವಂತೆ ಮಾಡುತ್ತಾನೆ. ನಿಮ್ಮ ಮನಸ್ಸಿಗೆ ಒಪ್ಪುವಂತಹ ವಧುವೇ ಸಿಕ್ಕಿ ನಿಮ್ಮ ವಿವಾಹವೂ ನೆರವೇರುತ್ತದೆ. ಕುಲದೇವರನ್ನು ದರ್ಶಿಸಿ ಬನ್ನಿ. ಮದುವೆಯ ನಂತರ ಗಿರಿಜಾ ಕಲ್ಯಾಣ ಮಾಡಿಸುವೆನೆಂದು ಪ್ರಾರ್ಥನೆ ಮಾಡಿಕೊಳ್ಳಿ. ಶುಭವಾಗಲಿದೆ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Vastu Tips For Before Entering A New Home : ಹೊಸ ಮನೆ ಪ್ರವೇಶಿಸುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ