Site icon Vistara News

Astrology Answers : ನಾನು ಪದವಿ ಓದುತ್ತಿದ್ದೇನೆ, ನನ್ನ ಮುಂದಿನ ಭವಿಷ್ಯ ತಿಳಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಪದವಿ ಓದುತ್ತಿದ್ದೇನೆ. ಓದು ಮುಗಿದ ನಂತರ ನನಗೆ ಕೆಲಸ ಸಿಗುತ್ತದೆಯೇ ಎಂಬ ಆತಂಕ ಕಾಡುತ್ತಿದೆ. ದಯವಿಟ್ಟು ನನ್ನ ಮುಂದಿನ ಭವಿಷ್ಯ ತಿಳಿಸಿ ಗುರೂಜಿ
ರಾಶಿ: ತುಲಾ ನಕ್ಷತ್ರ: ಹಸ್ತ

ಪರಿಹಾರ: ಸದ್ಯ ನೀವು ನಿಮ್ಮ ಮುಂದಿನ ಭವಿಷ್ಯದ ಕಡೆ ಹೆಚ್ಚು ಯೋಚಿಸುವುದಕ್ಕಿಂತ ಜ್ಞಾನ ಸಂಪಾದನೆಗೆ, ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ನೀಡಿ. ರಾತ್ರಿ- ಹಗಲು ಎನ್ನದೆ ಓದುವುದೊಂದೆ ನಿಮ್ಮ ಧ್ಯೇಯವಾಗಿರಲಿ. ಹಸ್ತ ನಕ್ಷತ್ರದವರಿಗೆ ಪಂಚಮದಲ್ಲಿ ಶನಿ ಇದ್ದರೂ, ಈಗ ತಾನೇ, ಗುರುವು ಸಪ್ತಮಕ್ಕೆ ಬಂದಿರುವುದರಿಂದ ಇನ್ನು ಮುಂದೆ ಆತನೇ ನಿಮ್ಮನ್ನು ಕೈ ಹಿಡಿದು ನಡೆಸುತ್ತಾನೆ. ಈಗ ನೀವು ಸಮಯವನ್ನು ಹಾಳು ಮಾಡಬೇಡಿ. ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಂಡು ಗುರಿಯನ್ನು ಮುಟ್ಟುವಕಡೆಗೆ ನಿಮ್ಮ ಗಮನ ಹರಿಸಿ. ನಿತ್ಯ ಸರಸ್ವತಿ ಅಷ್ಟೋತ್ತರ ಪಠಿಸಿ. ನಿತ್ಯ ಗಣಪತಿಗೆ 21ಗರಿಕೆ ಇರಿಸಿ, ಪೂಜೆ ಮಾಡಿ. ನಿಮಗೆ ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version