ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಶನಿಯ ಸಂಚಾರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಶನಿ ಸಾಡೇಸಾತಿ ಮತ್ತು ಶನಿ ದೆಸೆ ಇದ್ದಲ್ಲಿ ಶನಿಯು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಾನೆ.
ಯಾವುದೇ ರಾಶಿಯ ಮೇಲೆ ಶನಿ ಸಾಡೇಸಾತಿಯು ಏಳೂವರೆ ವರ್ಷಗಳ ಕಾಲ ಇರುತ್ತದೆ. ಶನಿಯು ಮನೆಯನ್ನು ಬದಲಾಯಿಸಿದಾಗ ಮೂರು ರಾಶಿಗಳಿಗೆ ಶನಿ ಸಾಡೇಸಾತಿ ಆರಂಭವಾಗುತ್ತದೆ. ಶನಿ ದೆಸೆ ಎಂದರೆ ಶನಿಯು ರಾಶಿಚಕ್ರವನ್ನು ಬದಲಾಯಿಸುವ ಸಮಯದಲ್ಲಿ ಎಂಟನೇ ಹಾಗೂ ನಾಲ್ಕನೇ ಮನೆಯಲ್ಲಿರುವ ರಾಶಿ ಚಕ್ರಗಳಿಗೆ ಶನಿ ದೆಸೆ ಪ್ರಾರಂಭವಾಗುತ್ತದೆ.
ಸಾಡೇಸಾತಿ, ಶನಿ ದೆಸೆ ಎಂದರೇನು?
ಸಾಡೇಸಾತಿ ಶನಿ ಎಂದರೆ ಶನಿ ನಿಮ್ಮ ರಾಶಿಯ ಹಿಂದಿನ ರಾಶಿ ನಿಮ್ಮ ರಾಶಿ ಹಾಗೂ ನಿಮ್ಮ ಮುಂದಿನ ರಾಶಿಯಲ್ಲಿ ಸಂಚಾರ ಮಾಡುವ ಸಮಯವನ್ನು ಸಾಡೇಸಾತಿ ಶನಿ ಎನ್ನುತ್ತಾರೆ. ಸಾಡೇಸಾತಿ ಎಂದರೆ ಏಳೂವರೆ ವರ್ಷ. ಒಂದು ರಾಶಿಯಲ್ಲಿ ಶನಿಯು ಎರಡೂವರೆ ವರ್ಷ ಇರುತ್ತಾನೆಯಾದ್ದರಿಂದ ಮೂರು ರಾಶಿಯಲ್ಲಿ ಸೇರಿ ಒಟ್ಟು ಏಳುವರೆ ವರ್ಷ ಎಂದು ಲೆಕ್ಕಹಾಕಲಾಗುತ್ತದೆ. ಸಾಡೇಸಾತಿ ಶನಿಯ ಮೊದಲ ಐದು ವರ್ಷಗಳು ಅತಿ ಕಠಿಣವಾದ ಸಮಯ. ಕೊನೆಯ ಎರಡೂವರೆ ವರ್ಷಗಳು ಅಷ್ಟೊಂದು ಕಠಿಣವಾಗಿರುವುದಿಲ್ಲ. ಈ ಏಳೂವರೆ ವರ್ಷದಲ್ಲಿ ಮಧ್ಯೆ ಗುರುಬಲ ಇದ್ದರೆ ಈ ಸಮಯದಲ್ಲಿ ಕಷ್ಟಗಳು ಹೆಚ್ಚಾಗಿರುವುದಿಲ್ಲ.
ಸಾಡೇಸಾತಿ ಎಲ್ಲರ ಜೀವನದಲ್ಲಿ ಪ್ರತೀ ಇಪ್ಪತ್ತೆರಡುವರೆ ವರ್ಷಕ್ಕೆ ಒಮ್ಮೆ ಬರುತ್ತದೆ. ಅಂದರೆ ಒಬ್ಬ ಮನುಷ್ಯನ ಜೀವನದಲ್ಲಿ 3 ಬಾರಿ ಸಾಡೇಸಾತಿ ಬರಬಹುದು. ಸಾಡೇಸಾತಿ ಶನಿ ಬೇರೆ, ಶನಿ ದೆಶೆಯೇ ಬೇರೆ. ಶನಿ ದೆಶೆ ಎಲ್ಲರ ಜೀವನದಲ್ಲಿಯೂ ಬರುವುದಿಲ್ಲ. ಆಶ್ಲೇಷ, ಜ್ಯೇಷ್ಠ, ರೇವತಿ, ನಕ್ಷತ್ರ ದಲ್ಲಿ ಹುಟ್ಟಿದವರಿಗೆ ಶನಿ ದೆಶೆ ಇರುವುದಿಲ್ಲ.
ಈ ಲೇಖನದಲ್ಲಿ ಹನ್ನೆರಡು ರಾಶಿಗಳಿಗೆ ಸಾಡೇ ಸಾತಿ ಅವಧಿ, ಮತ್ತು ಶನಿ ದೆಸೆಯ ಅವಧಿ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯಗೊಳ್ಳುತ್ತದೆ ಎನ್ನುವುದನ್ನು ವಿವರಿಸಲಾಗಿದೆ.
ಮೇಷ: ಈ ರಾಶಿಯವರಿಗೆ ಸಾಡೇ ಸಾತಿ ಅವಧಿ 29 ಮಾರ್ಚ್ 2025ರಿಂದ 31 ಮೇ 2032ರವರೆಗೆ ಇರುತ್ತದೆ. ಶನಿ ದೆಸೆಯ ಅವಧಿ ಯು 13 ಜುಲೈ 2034 ರಿಂದ 27 ಆಗಸ್ಟ್ 2036 ಹಾಗೂ 12 ಡಿಸೆಂಬರ್ 2043ರಿಂದ 8 ಡಿಸೆಂಬರ್ 2046ರವರೆಗೆ ಇರುತ್ತದೆ.
ವೃಷಭ: ನಿಮಗೆ ಸಾಡೇಸಾತಿ ಅವಧಿಯು 3 ಜೂನ್ 2027ರಿಂದ 13 ಜುಲೈ 2034ರವರೆಗೆ ಇರುತ್ತದೆ. ಶನಿ ದಸೆಯು 27 ಆಗಸ್ಟ್ 2036ರಿಂದ 22 ಅಕ್ಟೋಬರ್ 2038ರವರೆಗೆ ಇರುತ್ತದೆ.
ಮಿಥುನ: ಸಾಡೇಸಾತಿ ಅವಧಿಯು 8 ಆಗಸ್ಟ್ 2029ರಿಂದ 27 ಆಗಸ್ಟ್ 2036ರವರೆಗೆ ಮುಂದುವರಿಯುವುದು. ಶನಿ ದೆಸೆಯ ಅವಧಿಯು 24 ಜನವರಿ 2020 ರಿಂದ 29 ಏಪ್ರಿಲ್ 2022 ರವರೆಗೆ ಹಾಗೂ 22 ಅಕ್ಟೋಬರ್ 2038ರಿಂದ 29ಜನವರಿ 2041 ರವರೆಗೆ ಇರುವುದು.
ಕಟಕ: ಈ ರಾಶಿಯವರಿಗೆ ಸಾಡೇಸಾತಿ ಅವಧಿಯು ಮೇ 31, 2032 ರಿಂದ ಪ್ರಾರಂಭವಾಗಿ ಅಕ್ಟೋಬರ್ 22, 2038 ರವರೆಗೆ ಮುಂದುವರಿಯುವುದು. ಶನಿ ದೆಸೆಯು 29 ಏಪ್ರಿಲ್ 2022 ರಿಂದ 29 ಮಾರ್ಚ್ 2025 ಹಾಗೂ 29 ಜನವರಿ 2041 ರಿಂದ 12 ಡಿಸೆಂಬರ್ 2043 ರವರೆಗೆ ಇರುತ್ತದೆ.
ಸಿಂಹ: ಸಾಡೇಸಾತಿಯು 13 ಜುಲೈ 2034 ರಿಂದ 29 ಜನವರಿ 2041 ರವರೆಗೆ ಇರುತ್ತದೆ 29 ಮಾರ್ಚ್ 2025 ರಿಂದ 3 ಜೂನ್ 2027 ರವರೆಗೆ ಹಾಗೂ 12 ಡಿಸೆಂಬರ್2043 ರಿಂದ 8 ಡಿಸೆಂಬರ್2046 ರವರೆಗೆ ಶನಿ ದೆಸೆ ನಡೆಯುವುದು.
ಕನ್ಯಾ: ಈ ರಾಶಿಯವರಿಗೆ ಸಾಡೇ ಸಾತಿ ಅವಧಿಯು 27 ಆಗಸ್ಟ್ 2036ರಿಂದ 12 ಡಿಸೆಂಬರ್ 2043 ರವರೆಗೆ ಹಾಗೂ ಶನಿ ದೆಸೆಯು 3 ಜೂನ್ 2027 ರಿಂದ 8 ಆಗಸ್ಟ್ 2029ರವರೆಗೆ ಇರುತ್ತದೆ.
ತುಲಾ: ಶನಿ ಸಾಡೇಸಾತಿ ಅವಧಿಯು 22 ಅಕ್ಟೋಬರ್ 2038ರಿಂದ 8 ಡಿಸೆಂಬರ್ 2046 ರವರೆಗೆ ಇರುತ್ತದೆ ಹಾಗೂ ಶನಿ ದೆಸೆ 24 ಜನವರಿ 2020ರಿಂದ 29 ಏಪ್ರಿಲ್ 2022ರವರೆಗೆ ಹಾಗೂ 8 ಆಗಸ್ಟ್ 2029ರಿಂದ 31 ಮೇ 2031 ರವರೆಗೆ ಇರುತ್ತದೆ.
ವೃಶ್ಚಿಕ: ಸಾಡೇಸಾತಿ ಅವಧಿಯು ಈ ರಾಶಿಯವರಿಗೆ 28 ಜನವರಿ 2041 ರಿಂದ ಪ್ರಾರಂಭವಾದರೆ 3 ಡಿಸೆಂಬರ್ 2049ರವರೆಗೆ ಇರುತ್ತದೆ. ಶನಿ ದೆಸೆಯು 29 ಏಪ್ರಿಲ್ 2022 ರಿಂದ 29 ಮಾರ್ಚ್ 2025ರವರೆಗೆ ಹಾಗೂ 31 ಮೇ 2032 ರಿಂದ 13 ಜುಲೈ 2034 ರವರೆಗೆ ಮುಂದುವರಿಯುತ್ತದೆ.
ಧನುಸ್ಸು: ಈ ರಾಶಿಯವರಿಗೆ ಶನಿಯ ಸಾಡೇಸಾತಿಯು 12 ಡಿಸೆಂಬರ್ 2043 ರಿಂದ 3 ಡಿಸೆಂಬರ್ 2049 ರವರೆಗೆ, ಶನಿ ದೆಸೆ 29 ಮಾರ್ಚ್ 2025 ರಿಂದ 3 ಜೂನ್ 2027 ರವರೆಗೆ ಹಾಗೂ 13 ಜುಲೈ 2034 ರಿಂದ 27 ಆಗಸ್ಟ್ 2036ರವರೆಗೆ ಇರುತ್ತದೆ.
ಕಷ್ಟವನ್ನಷ್ಟೇ ಕೊಡುವುದಿಲ್ಲ ಶನಿ ಮಹಾರಾಜ!
ಶನಿ ದುಃಖ, ದುಮ್ಮಾನ, ಕಷ್ಟ- ಸಹಿಷ್ಣುತೆ ನೀಡುವ ಪರಮ ನ್ಯಾಯಾಧೀಶ. ಜೀವನದಲ್ಲಿ ಏರು- ಪೇರು ತಂದೊಡ್ಡುವ ಗ್ರಹವಾಗಿದ್ದರೂ, ಸಾಡೇಸಾತಿಯಲ್ಲಿ ಎಲ್ಲರಿಗೂ ಕಷ್ಟವಾಗುವುದಿಲ್ಲ. ಮಕರ ಲಗ್ನದಲ್ಲಿ ಅಥವಾ ಕುಂಭ ಲಗ್ನದಲ್ಲಿ ಹುಟ್ಟಿದವರು ಅಥವಾ ಯಾರ ಜಾತಕದಲ್ಲಿ ಶನಿ ತುಲಾ ರಾಶಿಯಲ್ಲಿ ಇರುತ್ತಾನೋ ಮತ್ತು ಯಾರ ಲಗ್ನ ಚಂದ್ರ ಮತ್ತು ಶನಿಗೆ ಗುರು ದೃಷ್ಟಿ ಇರುತ್ತದೆಯೋ ಅವರಿಗೆ ಶನಿಯಿಂದ ಕಷ್ಟಗಳು ಬರುವುದಿಲ್ಲ.
ಶನಿ ವೇದಾಂತ ಗ್ರಹ. ಒಂದು ವೇಳೆ ನಮಗೆ ಕಷ್ಟ ಕೊಟ್ಟರೂ ಅದರಿಂದ ಒಳಿತೇ ಆಗುತ್ತದೆ. ಕಷ್ಟಗಳ ಮೂಲಕ ನಮ್ಮ ಜೀವನವನ್ನು ಆತ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಾನೆ.
ಮಕರ: ಸಾಡೇಸಾತಿಯು ಈಗಾಗಲೇ 26 ಜನವರಿ 2017ರಿಂದ ಆರಂಭವಾಗಿದ್ದು, 29. ಶನಿ ದೆಸೆ 3 ಜೂನ್ 2027 ರಿಂದ 8 ಆಗಸ್ಟ್ 2029ರವರೆಗೆ ಹಾಗೂ 27 ಆಗಸ್ಟ್ 2036ರಿಂದ 22 ಅಕ್ಟೋಬರ್ 2038ರವರೆಗೆ ಇರುತ್ತದೆ.
ಕುಂಭ: ನಿಮಗೆ ಸಾಡೇಸಾತಿಯು 24 ಜನವರಿ 2020ರಿಂದ ಪ್ರಾರಂಭವಾಗಿದ್ದು, 3 ಜೂನ್ 2027ರವರೆಗೆ ಮುಂದುವರಿಯುವುದು. ಶನಿ ದೆಸೆಯು 8 ಆಗಸ್ಟ್ 2029ರಿಂದ 31 ಮೇ 2032ರವರೆಗೆ ಹಾಗೂ 22 ಅಕ್ಟೋಬರ್ 2038ರಿಂದ 29 ಜನವರಿ 2041ರವರೆಗೆ ನಡೆಯುವುದು.
ಮೀನ: ಶನಿ ಸಾಡೇಸಾತಿ ಅವಧಿಯು ನಿಮಗೆ 29 ಏಪ್ರಿಲ್ 2022 ರಿಂದ ಆರಂಭವಾಗಿ 8 ಆಗಸ್ಟ್ 2029 ರವರೆಗೆ ಮುಂದುವರಿಯಲಿದೆ. ಶನಿ ದೆಸೆ 31 ಮೇ 2032 ರಿಂದ 13 ಜುಲೈ 2034 ರವರೆಗೆ ಹಾಗೂ 29 ಜನವರಿ 2041ರಿಂದ 12 ಡಿಸೆಂಬರ್ 2043ರವರೆಗೆ ಇರಲಿದೆ.
ಇದನ್ನೂ ಓದಿ| ರಾಹು ಗ್ರಹವನ್ನು ಒಲಿಸಿಕೊಳ್ಳುವುದು ಹೇಗೆ ಗೊತ್ತೇ?
ನಿಮ್ಮ ಜಾತಕದಲ್ಲಿ ಶನಿಯ ಮನೆಯಾವುದು, ಲಗ್ನ ಯಾವುದು ಎಂಬುದರ ಮೇಲೆ ಸಾಡೇಸಾತಿ ಮತ್ತು ಶನಿ ದೆಶೆಯ ಪರಿಣಾಮ ಲೆಕ್ಕಹಾಕಲಾಗುತ್ತದೆ. ಹೀಗಾಗಿ ಶನಿದೆಶೆ ಆರಂಭವಾಗುತ್ತಿದೆ ಎಂದ ಕೂಡಲೇ ಯಾರೂ ಆತಂಕ ಪಡಬೇಕಾಗಿಲ್ಲ. ನ್ಯಾಯ ಮಾರ್ಗದಲ್ಲಿ ನಡೆದರೆ ಶನಿಯು ಕೃಪೆ ತೋರುತ್ತಾನೆ.